ಒಪ್ಪಿಗೆಯಿಲ್ಲದೆ ಹೆಸರು, ಪೋಟೊ, ಧ್ವನಿ ಬಳಕೆ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಟ ರಜನಿಕಾಂತ್
ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಸಾರ್ವಜನಿಕ ನೋಟಿಸ್ ಜಾರಿ ಮಾಡಿದ್ದು, ಅವರ ಒಪ್ಪಿಗೆಯನ್ನು ಪಡೆಯದೆ ನಟನ ಹೆಸರು, ಪೋಟೊ, ಧ್ವನಿ ಇತ್ಯಾದಿಗಳನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
Published: 29th January 2023 02:21 PM | Last Updated: 29th January 2023 02:21 PM | A+A A-

ರಜನಿಕಾಂತ್
ಚೆನ್ನೈ: ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಸಾರ್ವಜನಿಕ ನೋಟಿಸ್ ಜಾರಿ ಮಾಡಿದ್ದು, ಅವರ ಒಪ್ಪಿಗೆಯನ್ನು ಪಡೆಯದೆ ನಟನ ಹೆಸರು, ಪೋಟೊ, ಧ್ವನಿ ಇತ್ಯಾದಿಗಳನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಟನ ಧ್ವನಿ, ಫೋಟೊ, ಹೆಸರು ಮತ್ತು ಅವರ ಇತರ ವಿಶಿಷ್ಟ ನಡವಳಿಕೆಯನ್ನು ಒಳಗೊಂಡಂತೆ ನಟನ ವ್ಯಕ್ತಿತ್ವವನ್ನು ಬಳಸಿಕೊಳ್ಳುವವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿ ಅವರ ವಕೀಲ ಎಸ್.ಎಳಂಭರತಿ ಸಾರ್ವಜನಿಕ ನೋಟಿಸ್ ಜಾರಿ ಮಾಡಿದ್ದಾರೆ.
ತನ್ನ ವ್ಯಕ್ತಿತ್ವ, ಹೆಸರು, ಧ್ವನಿ, ಫೋಟೊ ಇತ್ಯಾದಿಗಳ ವಾಣಿಜ್ಯ ಬಳಕೆಯ ಮೇಲೆ ನಟನಿಗೆ ಮಾತ್ರ ನಿಯಂತ್ರಣವಿದೆ. ಬೇರೆ ಯಾರೊಬ್ಬರೂ ಬಳಸಿಕೊಳ್ಳುವಂತಿಲ್ಲ ಎಂದು ಶನಿವಾರ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕೆಲವು ಉತ್ಪನ್ನಗಳನ್ನು ಖರೀದಿಸಲು ಜನರನ್ನು ಪ್ರಲೋಭಿಸಲು ಹಲವಾರು ಮಾಧ್ಯಮಗಳು, ಪ್ಲಾಟ್‌ಫಾರ್ಮ್‌ಗಳು, ಉತ್ಪನ್ನ ತಯಾರಕರು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ತಮ್ಮ ಹೆಸರು, ಫೋಟೊ, ಧ್ವನಿ, ವ್ಯಂಗ್ಯ ಚಿತ್ರ ಮತ್ತು ಕಲಾತ್ಮಕ ಚಿತ್ರ ಮತ್ತು ಎಐ ರಚಿಸಿದ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನೋಟಿಸ್ ಹೇಳಿದೆ.
'ಓರ್ವ ನಟನಾಗಿ ಮತ್ತು ಮಾನವನಾಗಿ ಅವರ ವರ್ಚಸ್ಸು ಮತ್ತು ಸ್ವಭಾವವು ಅವರಿಗೆ ಪ್ರಪಂಚದಾದ್ಯಂತದ ಲಕ್ಷಾಂತರ ಮತ್ತು ಲಕ್ಷಾಂತರ ಅಭಿಮಾನಿಗಳಿಂದ 'ಸೂಪರ್‌ಸ್ಟಾರ್' ಎಂಬ ಬಿರುದನ್ನು ತಂದುಕೊಟ್ಟಿದೆ. ಅವರ ಅಭಿಮಾನಿ ಬಳಗ ಮತ್ತು ಚಿತ್ರರಂಗದಾದ್ಯಂತ ಅವರ ಗೌರವ ಸಾಟಿಯಿಲ್ಲದ ಮತ್ತು ನಿರ್ವಿವಾದದ್ದು. ಅವರ ಖ್ಯಾತಿ ಅಥವಾ ವೈಯಕ್ತಿಕ ಜೀವನಕ್ಕೆ ಯಾವುದೇ ಹಾನಿಯು ನಮ್ಮ ಕ್ಲೈಂಟ್‌ಗೆ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ರಜನಿಕಾಂತ್ ಸದ್ಯ ಬಿಗ್ ಬಜೆಟ್ ಸಿನಿಮಾ 'ಜೈಲರ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ, ಇದರಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಕನ್ನಡದ ಸೂಪರ್ ಸ್ಟಾರ್ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.