ನಿತೇಶ್ ತಿವಾರಿ 'ರಾಮಾಯಣ' ತಿರಸ್ಕರಿಸಿದ ಯಶ್: 'ರಾವಣ' ಪಾತ್ರ ಕೈ ಬಿಡುವಂತೆ ಸಲಹೆ ನೀಡಿದ್ದು ಯಾರು?
ಇತ್ತೀಚೆಗೆ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ಯಶ್ ರಾವಣ ಪಾತ್ರ ಮಾಡುತ್ತಾರೆಂಬ ಮಾತುಗಳು ಕೇಳಿ ಬಂದಿದ್ದವು. ಮೊದಲು ಯಶ್ ರಾವಣ ಪಾತ್ರ ಮಾಡಲು ಬಹಳ ಉತ್ಸುಕರಾಗಿದ್ದರು, ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ಯಶ್ ರಾವಣ ಪಾತ್ರ ನಿರಾಕರಿಸಿದ್ದಾರೆ ಎನ್ನಲಾಗಿದೆ.
Published: 12th June 2023 04:24 PM | Last Updated: 12th June 2023 06:51 PM | A+A A-

ಯಶ್
ಇತ್ತೀಚೆಗೆ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ಯಶ್ ರಾವಣ ಪಾತ್ರ ಮಾಡುತ್ತಾರೆಂಬ ಮಾತುಗಳು ಕೇಳಿ ಬಂದಿದ್ದವು. ಮೊದಲು ಯಶ್ ರಾವಣ ಪಾತ್ರ ಮಾಡಲು ಬಹಳ ಉತ್ಸುಕರಾಗಿದ್ದರು, ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ಯಶ್ ರಾವಣ ಪಾತ್ರ ನಿರಾಕರಿಸಿದ್ದಾರೆ ಎನ್ನಲಾಗಿದೆ.
ರಾವಣನ ಪಾತ್ರ ಮಾಡಲು ಯಶ್ ಆಸಕ್ತಿ ವಹಿಸಿದ್ದರು. ರಾಮನ ಸದ್ಗುಣಶೀಲ ಪಾತ್ರವನ್ನು ನಿರ್ವಹಿಸುವುದಕ್ಕಿಂತ ಸಂಕೀರ್ಣ ಮತ್ತು ಶಕ್ತಿಯುತ ಎದುರಾಳಿ ಪಾತ್ರ ಮಾಡುವುದು ಲಾಭದಾಯಕ ಎಂದು ಅವರು ನಂಬಿದ್ದರು. ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸಲಿದ್ದು, ಈ ಸಿನಿಮಾಗೆ ಸೇರುವ ಯಶ್ ಅವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಪ್ರಾಜೆಕ್ಟ್ ನಿಂತುಹೋಗಿದ್ದು ಹೇಗೆ, ನಿರ್ದೇಶಕ ನರ್ತನ್ ಏನಂತಾರೆ?
ಆದರೆ, ಯಶ್ ಅವರ ತಂಡ ಈ ಪಾತ್ರವನ್ನು ಒಪ್ಪಿಕೊಳ್ಳದಂತೆ ಬಲವಾಗಿ ಸಲಹೆ ನೀಡಿದೆ. ತಮ್ಮ ಪ್ರೀತಿಯ ನಟ ರಾವಣನಷ್ಟು ಅಸಾಧಾರಣವಾದ ನೆಗೆಟಿವ್ ರೋಲ್ ನಿರ್ವಹಿಸುವುದನ್ನು ಅವರ ಅಭಿಮಾನಿಗಳು ಮೆಚ್ಚುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಈ ಪಾತ್ರ ತಮ್ಮ ಅಭಿಮಾನಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಸಲಹೆ ಬಂದ ಹಿನ್ನೆಲೆಯಲ್ಲಿ ಯಶ್ ರಾವಣ ಪಾತ್ರ ಕೈ ಬಿಟ್ಟಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ನಟನಾಗಿ ಅವರ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಲು ಇದು ಉತ್ತಮ ಅವಕಾಶವಾಗಿದ್ದರೂ, ಯಶ್ ತಮ್ಮ ಅಭಿಮಾನಿಗಳ ಆಸೆಗೆ ವಿರುದ್ಧವಾಗಿ ನಡೆಯುವುದಿಲ್ಲ, ಅಭಿಮಾನಿಗಳ ಭಾವನೆಯನ್ನು ಪರಿಗಣಿಸಿ ಬೆಲೆ ನೀಡುತ್ತಾರೆ ಎಂದು ತಿಳಿದು ಬಂದಿದೆ.