ಪ್ರಭಾಸ್ ನಟನೆಯ 'ಆದಿಪುರುಷ' ಸಿನಿಮಾ ತೆರೆಗೆ: ನೆಟಿಜೆನ್ ಗಳ ಪ್ರಶಂಸೆಯ ಮಹಾಪೂರ, ಥಿಯೇಟರ್ ಗಳ ಮುಂದೆ ಅಭಿಮಾನಿಗಳ ಹಬ್ಬ

ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ. ಕಳೆದ ನಾಲ್ಕೈದು ವರ್ಷಗಳಲ್ಲಿ ಸತತ ಸೋಲಿನ ನಂತರ ತೆರೆ ಕಾಣುತ್ತಿರುವ ಪ್ರಭಾಸ್ ಸಿನಿಮಾ.
ಆದಿಪುರುಷ ಚಿತ್ರದ ಸ್ಟಿಲ್
ಆದಿಪುರುಷ ಚಿತ್ರದ ಸ್ಟಿಲ್

ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ. ಕಳೆದ ನಾಲ್ಕೈದು ವರ್ಷಗಳಲ್ಲಿ ಸತತ ಸೋಲಿನ ನಂತರ ತೆರೆ ಕಾಣುತ್ತಿರುವ ಪ್ರಭಾಸ್ ಸಿನಿಮಾ. ಓಂ ರಾವುತ್ ನಿರ್ದೇಶನದ ಈ ಸಿನಿಮಾದಲ್ಲಿ ಜಾನಕಿ ದೇವಿಯಾಗಿ ಬಾಲಿವುಡ್ ಬೆಡಗಿ ಕೃತಿ ಸನನ್ ನಟಿಸಿದ್ದಾರೆ. ಭೂಷಣ್ ಕುಮಾರ್ ಅವರು ಟಿ ಸಿರೀಸ್ ಬ್ಯಾನರ್ ಅಡಿಯಲ್ಲಿ 'ಆದಿಪುರುಷ' ನಿರ್ಮಿಸಿದ್ದಾರೆ.

ಪೌರಾಣಿಕ ಆ್ಯಕ್ಷನ್ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. 'ಆದಿಪುರುಷ' ನ್ನು 3ಡಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ. ರಾಘವ್ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದು ಲಂಕೇಶ್ವರನಾಗಿ ಸೈಫ್ ಆಲಿಖಾನ್ ಕಾಣಿಸಿಕೊಂಡಿದ್ದಾರೆ. 

ಆದಿಪುರುಷ ಸಿನಿಮಾದ ಕಥೆ ಏನಿರಲಿದೆ ಎಂಬುದು ಬಹುತೇಕರಿಗೆ ತಿಳಿದ ವಿಚಾರ. ಶ್ರೀರಾಮನ ಪತ್ನಿ ಸೀತೆಯನ್ನು ದುಷ್ಟ ರಾವಣ ಅಪಹರಿಸುತ್ತಾನೆ. ಶ್ರೀರಾಮನು ವಾನರ ಸೇನೆಯ ಸಹಾಯ ಪಡೆದು ರಾವಣನನ್ನು ಕೊಂದು ಸೀತೆಯನ್ನು ತನ್ನೊಂದಿಗೆ ಅಯೋಧ್ಯೆಗೆ ಕರೆತರುತ್ತಾನೆ. ಈ ಕಥೆಯನ್ನು ಅದ್ಬುತ ಎನಿಸುವ ದೃಶ್ಯವೈಭವದ ಮೂಲಕ ಆದಿಪುರುಷ್‌ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಟ್ರೇಲರ್‌ ರಿಲೀಸ್‌ ಆದ ಬಳಿಕ ಕೇಳಿ ಬಂದಿದ್ದ ನೆಗೆಟಿವ್‌ ಕಮೆಂಟ್‌ಗಳು ಇದೀಗ ಸಿನಿಮಾ ಬಿಡುಗಡೆ ಆದ ಬಳಿಕ ದೂರವಾಗಿವೆ. ಸಿನಿಮಾ ನೋಡಿದ ಬಹುತೇಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸೋಷಿಯಲ್‌ ಮೀಡಿಯಾಗಳಲ್ಲಿ ಒಳ್ಳೊಳ್ಳೆ ರೇಟಿಂಗ್‌ ಸಹ ನೀಡುತ್ತಿದ್ದಾರೆ. ಇನ್ನು ಕೆಲವರು ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.

ಬರೋಬ್ಬರಿ 500 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಿದೆ. ಮುಂಗಡ ಬುಕಿಂಗ್‌ ಶುರುವಾದ ಬಳಿಕವೇ 12 ಕೋಟಿ ಬಿಜಿನೆಸ್‌ ಮಾಡಿದ್ದ ಈ ಸಿನಿಮಾ, ಮೊದಲ ದಿನ ಎಷ್ಟು ಕೋಟಿ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರವೂ ಸದ್ದು ಮಾಡುತ್ತಿದೆ. ಸಿನಿಮಾಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕ ಹಿನ್ನೆಲೆಯಲ್ಲಿ ಮೊದಲ ದಿನದ ಗಳಿಕೆ ವಿಚಾರದಲ್ಲಿ ಹಲವು ದಾಖಲೆ ಬರೆಯುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದಿರುವ ಆದಿಪುರುಷ್‌ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com