ಕಾಂತಾರ ಪ್ರೀಕ್ವೆಲ್‌: ರಿಷಬ್ ಶೆಟ್ಟಿ ಮುಂದಿವೆ ಹೊಸ ಸವಾಲು; ಪಾತ್ರಕ್ಕಾಗಿ ಹಲವು ರೀತಿಯಲ್ಲಿ ಸಿದ್ಧತೆ!

ರಿಷಬ್ ಶೆಟ್ಟಿ ಎಂದಿನಂತೆ ತಮ್ಮ ಕೆಲಸ ಮುಂದುವರೆಸಿದ್ದಾರೆ. ಯಾವುದೇ ರೀತಿಯ ಬೇರೆ ವಿಷಯಗಳನ್ನ ತಲೆಗೆ ಹಚ್ಚಿಕೊಳ್ಳದೇ ಧ್ಯಾನಸ್ಥ ಸ್ಥಿತಿಯಲ್ಲಿ ಕಾಂತಾರ ಪ್ರಿಕ್ವೆಲ್ ಸಿದ್ಧತೆಗೊಳಿಸುತ್ತಿದ್ದಾರೆ.
ರಿಷಬ್ ಶೆಟ್ಟಿ ಕಾಂತಾರ
ರಿಷಬ್ ಶೆಟ್ಟಿ ಕಾಂತಾರ

ಬೆಂಗಳೂರು: ರಿಷಬ್ ಶೆಟ್ಟಿ ಎಂದಿನಂತೆ ತಮ್ಮ ಕೆಲಸ ಮುಂದುವರೆಸಿದ್ದಾರೆ. ಯಾವುದೇ ರೀತಿಯ ಬೇರೆ ವಿಷಯಗಳನ್ನ ತಲೆಗೆ ಹಚ್ಚಿಕೊಳ್ಳದೇ ಧ್ಯಾನಸ್ಥ ಸ್ಥಿತಿಯಲ್ಲಿ ಕಾಂತಾರ ಪ್ರಿಕ್ವೆಲ್ ಸಿದ್ಧತೆಗೊಳಿಸುತ್ತಿದ್ದಾರೆ.

ಆದರೆ ರಿಷಬ್ ಶೆಟ್ರಿಗೆ ಇನ್ನೂ ಒಂದು ಒತ್ತಡ ಇದ್ದೇ ಇದೆ. ಅದು ಗೆಲುವು, ಜನರ ನಿರೀಕ್ಷೆಯನ್ನ ಹುಸಿಗೊಳಿಸದೇ ಇರೋವಂತೆ ಕಥೆ ಮಾಡಬೇಕು ಅನ್ನುವ ಒತ್ತಡವಿದೆ, ಹೀಗಾಗಿ ಚಿತ್ರದ ಪೂರ್ವಭಾವಿ ಕೆಲಸದಲ್ಲಿ, ಯೋಜನೆಯಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್  ಕಾಂತಾರ ಪ್ರೀಕ್ವೆಲ್‌ ಆಗಸ್ಟ್ 27 ರಂದು ರಿಲೀಸ್ ಆಗಲಿದೆ ಎಂದು ತಿಳಿಸಿದೆ. ಆದರೆ ಬಿಡುಗಡೆಗೆ ಇನ್ನೂ ದಿನಾಂಕ ಅಂತಿಮಗೊಂಡಿಲ್ಲ ಈ ಸಂಬಂಧ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಕಾಂತಾರ 2 2022 ರ ಚಲನಚಿತ್ರಕ್ಕೆ ಮುನ್ನುಡಿಯಾಗಿ ಕಾರ್ಯನಿರ್ವಹಿಸುತ್ತದೆ, ಚಿತ್ರದಲ್ಲಿ ತೋರಿಸಲಾದ ಹಳ್ಳಿಗೆ ಅಪಾರ ಪ್ರಾಮುಖ್ಯತೆ ಹೊಂದಿರುವ 'ದೇವರ ಹಿನ್ನಲೆ'ಯ ಕಥೆ ಬಗ್ಗೆ ಹೊಸ ನಿರೂಪಣೆ ತರಲಾಗುತ್ತಿದೆ. ಇದಕ್ಕಾಗಿ ಕಥೆಯು ದೊಡ್ಡ ಪ್ರಮಾಣದಲ್ಲಿ ರೂಪುಗೊಳ್ಳುತ್ತಿದೆ ಎಂದು  ಮೂಲವು ತಿಳಿಸಿದೆ, ಆದರೆ ರಿಷಬ್ ತನ್ನ ಪ್ರಯತ್ನದಲ್ಲಿ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ.  ಚಿತ್ರ ಸೆಟ್ಟೇರಿರುವ ತನ್ನ ತವರು ಊರಿನಿಂದಲೇ ಕೆಲಸ ಮಾಡುತ್ತಿದ್ದಾರೆ.

ರಿಷಬ್ ಕಠಿಣ ತರಬೇತಿಗಾಗಿ ಸಮಯ ಮೀಸಲಿರಿಸಿದ್ದಾರೆ. ಕುದುರೆ ಸವಾರಿ ಕೌಶಲ್ಯ ಮತ್ತು ಜನಪ್ರಿಯ ಕಲೆಯಾದ ಕಳರಿ ಪಯಟ್ಟುಗಳನ್ನು ಕಲಿಯುತ್ತಿದ್ದಾರೆ ಎಂದು ವರದಿಯಾಗಿದೆ. ಕಾಂತಾರದಲ್ಲಿ ಸಪ್ತಮಿ ಗೌಡ, ಮತ್ತು ಅಚ್ಯುತ್ ಕುಮಾರ್ ಸೇರಿದಂತೆ ಹಲವಾರು ನಟರು ನಟಿಸಿದ್ದಾರೆ.

ಆದರೆ ಕಾಂತಾರ ಪ್ರಿಕ್ವೇಲ್ ನಲ್ಲಿ ರಿಷಬ್  ಹೊರತುಪಡಿಸಿ  ಬೇರೆ ಪಾತ್ರವರ್ಗದ ಬಗ್ಗೆ ಯಾವುದೇ ವಿವರಗಳಿಲ್ಲ.  ಕಾಂತಾರ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಅವರೊಂದಿಗೆ ಪ್ರಿಕ್ವೆಲ್ ನಲ್ಲಿ ಮತ್ತೆ ಒಂದಾಗುತ್ತಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ, ನಿರ್ಮಾಪಕರು ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ, ಆದರೂ ಇದು ಇನ್ನೂ ಅಂತಿಮಗೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com