ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ ಶಿವಾಜಿ ಸುರತ್ಕಲ್-2 ರಿಲೀಸ್ ಡೇಟ್ ಫಿಕ್ಸ್!
ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ 2 - 'ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಚಿತ್ರವು ಏಪ್ರಿಲ್ ತಿಂಗಳ 14ನೇ ತಾರೀಖು ಬಿಡುಗಡೆಯಾಗಲಿದೆ ಎಂದು ಚಿತ್ರತಂಡದಿಂದ ತಿಳಿದು ಬಂದಿದೆ.
Published: 07th March 2023 01:00 PM | Last Updated: 07th March 2023 02:30 PM | A+A A-

ರಮೇಶ್ ಅರವಿಂದ್
ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ 2 - 'ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಚಿತ್ರವು ಏಪ್ರಿಲ್ ತಿಂಗಳ 14ನೇ ತಾರೀಖು ಬಿಡುಗಡೆಯಾಗಲಿದೆ ಎಂದು ಚಿತ್ರತಂಡದಿಂದ ತಿಳಿದು ಬಂದಿದೆ.
ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ಅನೂಪ್ ಗೌಡ ಮತ್ತು ರೇಖಾ ಕೆ ಎನ್. ನಿರ್ಮಾಣ ಮಾಡುತ್ತಿದ್ದಾರೆ.. ಕೆ ಆರ್ ಜಿ ಸ್ಟೂಡಿಯೋಸ್ ಬಿಡುಗಡೆ ಮಾಡುತ್ತಿರುವ ಈ ಚಿತ್ರ ರಮೇಶ್ ಅರವಿಂದ್ ಅವರ 103 ಸಿನಿಮಾ ಆಗಲಿದೆ ‘ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಚಿತ್ರಕ್ಕೆ ಗುರುಪ್ರಸಾದ್ ಎಂ ಜಿ ಮತ್ತು ದರ್ಶನ್ ಅಂಬಟ್ ಛಾಯಾಗ್ರಹಣ ಮಾಡಿದ್ದಾರೆ.
ಪ್ರಸ್ತುತ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರ ತಂಡ ನಿರತವಾಗಿದೆ. ಚಿತ್ರದ ಕೊನೆಯ ಹಾಗೂ ಒಂದು ವಿಶಿಷ್ಟ ಹಾಡಿನ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮುಗಿಸಿದೆ ಚಿತ್ರತಂಡ. ಈ ಹಾಡಿಗೆ ಮೆರಗು ಹೆಚ್ಚಿಸಿದ್ದು 777 ಚಾರ್ಲಿ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ. ಹಾಡಿನ ಕೊರಿಯೋಗ್ರಫಿ ಧನಂಜಯ್ ಮಾಸ್ಟರ್ ಮಾಡಿದ್ದು, ಈ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್ ಹಾಗೂ ಮೇಘನಾ ಗಾಂವ್ಕರ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಶಿವಾಜಿ ಸುರತ್ಕಲ್ 2 ಚಿತ್ರದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಂಗೀತಾ ಶೃಂಗೇರಿ!
150 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ, ಜ್ಯೂಡಾ ಸ್ಯಾಂಡಿ ಸಿನಿಮಾಗೆ ಉತ್ತಮ ಸಂಗೀತ ನೀಡಿದ್ದಾರೆ ಎಂದು ನಿರ್ದೇಶಕ ರಮೇಶ್ ಅರವಿಂದ್ ತಿಳಿಸಿದ್ದಾರೆ.