Source : Express News Service
ನಟ ರಮೇಶ್ ಅರವಿಂದ್ ಅವರ ಮುಂಬರುವ ಚಿತ್ರ, ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ 2 ಸಿನಿಮಾವು ವಿಶೇಷ ಹಾಡೊಂದರಲ್ಲಿ ಚಾರ್ಲಿ 777 ಖ್ಯಾತಿಯ ಸಂಗೀತಾ ಶೃಂಗೇರಿಯನ್ನು ಹೊಂದಲು ಸಿದ್ಧವಾಗಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿರುವ ಹಾಡಿಗೆ ಧನಂಜಯ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.
ಸಂಗೀತಾ ಶೃಂಗೇರಿಗೆ ಇದು ಮೊದಲ ವಿಶೇಷ ಹಾಡು ಆಗಿದ್ದು, ಅವರು ರಮೇಶ್ ಅರವಿಂದ್ ಅವರೊಂದಿಗೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಮಾಯಾವಿಯ ನಿಗೂಢ ಪ್ರಕರಣ ಎಂದು ಕರೆಯಲ್ಪಡುವ ತನಿಖಾ ಥ್ರಿಲ್ಲರ್ ಪೋಸ್ಟ್ ಪ್ರೊಡಕ್ಷನ್‌ನ ಕೊನೆಯ ಹಂತದಲ್ಲಿದ್ದು, ಸಿನಿಮಾ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2: ಮೇಘನಾ ಗಾಂವ್ಕರ್ ಗೆ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ದೀಪಾ ಕಾಮತ್ ಪಾತ್ರ!
ರಮೇಶ್ ಅರವಿಂದ್ ಅವರ ಹಿಂದಿನ ಹಿಟ್ ಶಿವಾಜಿ ಸುರತ್ಕಲ್‌ನ ಸೀಕ್ವೆಲ್ ಅನ್ನು ಆಕಾಶ್ ಬರೆದಿದ್ದಾರೆ. ರೇಖಾ ಕೆಎನ್ ಮತ್ತು ಅನುಪ್ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಚಿತ್ರದಲ್ಲಿ ರಾಧಿಕಾ ನಾರಾಯಣ್, ನಾಸರ್, ಮೇಘನಾ ಗಾಂವ್ಕರ್ ಮತ್ತು ಬಾಲ ಕಲಾವಿದೆ ಆರಾಧ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ರಾಕೇಶ್ ಮೈಯ್ಯ, ವಿನಾಯಕ್ ಜೋಶಿ ರಘು ರಾಮನಕೊಪ್ಪ, ಶೋಭರಾಜ್, ಶ್ರೀನಿವಾಸ ಪ್ರಭು, ಸುಮಂತ್ ಭಟ್, ಸೃಷ್ಟಿ ಶೆಟ್ಟಿ ಮತ್ತು ಮಧುರಾ ಗೌಡ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ.