ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2: ಮೇಘನಾ ಗಾಂವ್ಕರ್ ಗೆ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ದೀಪಾ ಕಾಮತ್ ಪಾತ್ರ!

ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ.
ಮೇಘನಾ ಗಾಂವ್ಕರ್ ಮತ್ತು ರಮೇಶ್ ಅರವಿಂದ್
ಮೇಘನಾ ಗಾಂವ್ಕರ್ ಮತ್ತು ರಮೇಶ್ ಅರವಿಂದ್
Updated on

2020ರಲ್ಲಿ ತೆರೆಕಂಡು ಯಶಸ್ವಿಯಾದ ಸಿನಿಮಾ‌ ಶಿವಾಜಿ ಸುರತ್ಕಲ್ ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿದ್ದ ಈ‌ ಚಿತ್ರದ ಮುಂದಿನ ಸರಣಿ, ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ.

ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರದಲ್ಲಿ ಮೇಘನಾ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಯುವ ಮಹಿಳಾ ಪೊಲೀಸ್ ಅಧಿಕಾರಿಗಳ ಬಗ್ಗೆ ಅಧ್ಯಯನ ನಡೆಸಿರುವ ನಿರ್ದೇಶಕ ಆಕಾಶ್ ಶ್ರೀವತ್ಸ ಈ ಪಾತ್ರವನ್ನು ಸೃಷ್ಟಿಸಿದ್ದಾರೆ.

ವಿಶೇಷವೇನೆಂದರೆ ನಿಜ ಜೀವನದಲ್ಲಿ ಮೇಘನಾ ಅವರ ತಂದೆ ಕೂಡ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಈ ಪಾತ್ರದ ತಯಾರಿಗೆ ಮತ್ತಷ್ಟು ಸಹಕಾರಿಯಾಯಿತು. ಇನ್ನು ಚಿತ್ರದಲ್ಲಿ ಮೇಘನಾ ಅವರದ್ದು ಶಿವಾಜಿಯ ಮೇಲಧಿಕಾರಿಯ ಪಾತ್ರವಾಗಿದ್ದು, ತನಿಖೆಯ ಪ್ರತಿ ಹಂತದಲ್ಲೂ ಶಿವಾಜಿಯ ಜೊತೆಗಿದ್ದು ಚಿತ್ರಕ್ಕೆ ನಿಜವಾದ ಪೊಲೀಸ್ ಪವರ್ ಸಿಗುವಂತೆ ಮಾಡಿದ್ದಾರೆ. ಶಿವಾಜಿ ಸುರತ್ಕಲ್ 2 ಚಿತ್ರತಂಡ ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬದ(ಸೆ.10) ದಿನ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಉಳಿದಂತೆ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಡಬ್ಬಿಂಗ್ ಕೆಲಸಗಳು ಶುರುವಾಗಿದೆ.

ಚಿತ್ರಕ್ಕೆ ಜೂಡ ಸ್ಯಾಂಡಿರವರ ಸಂಗೀತ ಮತ್ತು ದರ್ಶನ್ ಅಂಬಟ್, ಗುರು ಪ್ರಸಾದ್ ಎಂ ಜಿ ಛಾಯಾಗ್ರಹಣವಿದೆ. ಅಂಜನಾದ್ರಿ ಸಿನಿ ಕ್ರಿಯೇಶನ್ಸ್​ನಲ್ಲಿ ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಕಾಶ್ ಶ್ರೀವತ್ಸ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಶಿವಾಜಿ ಸುರತ್ಕಲ್ 2 ಚಿತ್ರದಲ್ಲಿ ರಘು ರಾಮನಕೊಪ್ಪ, ರಾಧಿಕಾ ನಾರಾಯಣ್, ಶೋಭರಾಜ್, ಶ್ರೀನಿವಾಸ ಪ್ರಭು ಮತ್ತು ಸುಮಂತ್ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಸೃಷ್ಟಿ ಶೆಟ್ಟಿ ಮತ್ತು ಮಧುರಾ ಗೌಡ ಅವರ ಚೊಚ್ಚಲ ಚಿತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com