ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್-2 ಹೊಸ ಫೋಸ್ಟರ್ ಬಿಡುಗಡೆ
ನಟ ರಮೇಶ್ ಅರವಿಂದ್ ನಟನೆಯ' ಶಿವಾಜಿ ಸುರತ್ಕಲ್' ಚಿತ್ರದ ಎರಡನೇ ಭಾಗದ ಹೊಸ ಫೋಸ್ಟರ್ ಬಿಡುಗಡೆಯಾಗಿದೆ. 21 ದಿನಗಳ ಚಿತ್ರೀಕರಣದ ನಂತರ ಮಹಾಶಿವರಾತ್ರಿ ದಿನವಾದ ಇಂದು ಸಿನಿಮಾದ ಎರಡನೇ ಪೋಸ್ಟರ್ ನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.
Published: 01st March 2022 05:15 PM | Last Updated: 01st March 2022 05:33 PM | A+A A-

ನಟ ರಮೇಶ್ ಅರವಿಂದ್
ಬೆಂಗಳೂರು: ನಟ ರಮೇಶ್ ಅರವಿಂದ್ ನಟನೆಯ' ಶಿವಾಜಿ ಸುರತ್ಕಲ್' ಚಿತ್ರದ ಎರಡನೇ ಭಾಗದ ಹೊಸ ಫೋಸ್ಟರ್ ಬಿಡುಗಡೆಯಾಗಿದೆ. 21 ದಿನಗಳ ಚಿತ್ರೀಕರಣದ ನಂತರ ಮಹಾಶಿವರಾತ್ರಿ ದಿನವಾದ ಇಂದು ಸಿನಿಮಾದ ಎರಡನೇ ಪೋಸ್ಟರ್ ನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ 2020ರಲ್ಲಿ ಶಿವಾಜಿ ಸುರತ್ಕಲ್ ಸಿನಿಮಾದ ಮೊದಲ ಭಾಗ ಮಹಾಶಿವರಾತ್ರಿಯಂದೇ ತೆರೆ ಕಂಡಿತ್ತು.
ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ ಎರಡನೇ ಭಾಗದಲ್ಲೂ ರಮೇಶ್ ಅರವಿಂದ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಾಜಿಯ ವೈಯಕ್ತಿಕ ಜೀವನವನ್ನು ಸಹ ಹೇಳಲಾಗುತ್ತಿದೆ. ಈ ಬಾರಿ 'ದಿ ಮಿಸ್ಟೀರಿಸ್ ಕೇಸ್ ಆಫ್ ಮಾಯಾವಿ' ಭೇದಿಸಲು ಸಜ್ಜಾಗಿದ್ದಾರೆ. ನಾಸೀರ್ ಶಿವಾಜಿ ತಂದೆ ವಿಜಯೇಂದ್ರ ಸುರತ್ಕಲ್ ಪಾತ್ರವನ್ನು ನಿಭಾಯಿಸುತ್ತಿದ್ದು, ರಮೇಶ್ ಅರವಿಂದ್ ಅವರೊಂದಿಗೆ ಪ್ರಥಮ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಆಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ರಮೇಶ್ ಅರವಿಂದ್ ತಂದೆಯಾಗಿ ಹಿರಿಯ ನಟ ನಾಜರ್
ಶಿವಾಜಿ ಮಗಳಾದ ಸಿರಿ ಸುರತ್ಕಲ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ತನ್ನ ಮುದ್ದಿನ ಮಗಳನ್ನು ಚುಕ್ಕಿ ಎಂದು ಶಿವಾಜಿ ಕರೆಯುತ್ತಾರೆ. ಅಲ್ಲಿ ಶಿವಾಜಿಗೆ ಸಿಕ್ಕಿದ್ದೆಲ್ಲಿ ಎಂಬ ಪ್ರಶ್ನೆಗೂ ಈ ಚಿತ್ರದಲ್ಲಿ ಉತ್ತರ ಸಿಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸುರತ್ಕಲ್, ಮಲ್ಫೆ ಬೀಚ್, ಕಾಪು ಬೀಚ್, ಮರವಂತೆ, ಮುರ್ಡೇಶ್ವರ ಮತ್ತಿತರ ಕಡೆಗಳಲ್ಲಿ ಈಗಾಗಲೇ ಚಿತ್ರೀಕರಣ ಪೂರೈಸಲಾಗಿದೆ.
2 Years ago, On this auspicious Day of ಮಹಾ ಶಿವರಾತ್ರಿ,
— Ramesh Aravind (@Ramesh_aravind) March 1, 2022
We introduced Shivaji Surathkal with Case of Ranagiri Rahasya.
NOW…ShivajiSurathkal2 -Case of Maayavi is in shooting and progressing briskly…
Here is SS2 New Poster pic.twitter.com/jBeM6FDbEw
ಶಿವಾಜಿ ಸುರತ್ಕಲ್ ಎರಡನೇ ಭಾಗದಲ್ಲಿ ರಘು ರಾಮಣ್ಣಕೊಪ್ಪ, ರಾಧಿಕಾ ನಾರಾಯಣ್, ಮೇಘಾನ ಗಾಂವಕ್ಕರ್, ದೀಪಾ ಕಾಮತ್, ಶೋಭ್ ರಾಜ್ ಮತ್ತಿತರರು ನಟಿಸಿದ್ದಾರೆ. ಈ ಚಿತ್ರಕ್ಕೆ ದರ್ಶನ್ ಅಂಬಾಟ್ ಅವರ ಛಾಯಾಗ್ರಹಣವಿದ್ದು, ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಫ್ ಗೌಡ ಅವರು ಅಂಜನಾದ್ರಿ ಸಿನಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.