ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್ ಭಾಗಿ

ಇತ್ತೀಚೆಗಷ್ಟೇ ರಜನಿಕಾಂತ್ ಅವರ ಜೈಲರ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ಶಿವರಾಜಕುಮಾರ್, ಈಗ ಧನುಷ್ ನಾಯಕನಾಗಿ ನಟಿಸುತ್ತಿರುವ ಅವರ ಮುಂದಿನ ತಮಿಳು ಚಿತ್ರ ಕ್ಯಾಪ್ಟನ್ ಮಿಲ್ಲರ್ ಸೆಟ್‌ಗೆ ಸೇರಲಿದ್ದಾರೆ.
ಕ್ಯಾಪ್ಟನ್ ಮಿಲ್ಲರ್ ನಲ್ಲಿ ಶಿವರಾಜ್ ಕುಮಾರ್
ಕ್ಯಾಪ್ಟನ್ ಮಿಲ್ಲರ್ ನಲ್ಲಿ ಶಿವರಾಜ್ ಕುಮಾರ್

ಇತ್ತೀಚೆಗಷ್ಟೇ ರಜನಿಕಾಂತ್ ಅವರ ಜೈಲರ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ಶಿವರಾಜಕುಮಾರ್, ಈಗ ಧನುಷ್ ನಾಯಕನಾಗಿ ನಟಿಸುತ್ತಿರುವ ಅವರ ಮುಂದಿನ ತಮಿಳು ಚಿತ್ರ ಕ್ಯಾಪ್ಟನ್ ಮಿಲ್ಲರ್ ಸೆಟ್‌ಗೆ ಸೇರಲಿದ್ದಾರೆ.

ಅರುಣ್ ಮಾಥೇಶ್ವರನ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ಧನುಷ್ ಅವರ ಅಣ್ಣನಾಗಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂದು ವರದಿಯಾಗಿದೆ.  ಕುಟ್ರಾಂ ನಲ್ಲಿ ನಡೆಯುವ ಶೂ ಟಿಂಗ್ ಶೆಡ್ಯೂಲ್ ನಲ್ಲಿ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ,

ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಕಥೆಯು ಕ್ಯಾಪ್ಟನ್ ಮಿಲ್ಲರ್ ಚಿತ್ರಕತೆಯಾಗಿದೆ, ಕಿಶನ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಮಲಯಾಳಂ ನಟ ಸುಮೇಶ್ ಮೂರ್ ಮತ್ತು ಜಾನ್ ಕೊಕ್ಕೆನ್ ಸಹ ನಟಿಸಿದ್ದಾರೆ.

ಶ್ರೇಯಸ್ ಕೃಷ್ಣ ಅವರ ಛಾಯಾಗ್ರಹಣದೊಂದಿಗೆ, ಕ್ಯಾಪ್ಟನ್ ಮಿಲ್ಲರ್ ಜಿವಿ ಪ್ರಕಾಶ್ ಕುಮಾರ್ ಅವರ ಸಂಗೀತ ಮತ್ತು ನಾಗೂರನ್ ಅವರ ಸಂಕಲನ ಹೊಂದಿದೆ. ಸತ್ಯ ಜ್ಯೋತಿ ಫಿಲ್ಮ್ಸ್ ಬೆಂಬಲದೊಂದಿಗೆ, ಕ್ಯಾಪ್ಟನ್ ಮಿಲ್ಲರ್ ಪಟ್ಟಾಸ್ ಮತ್ತು ಮಾರನ್ ಪ್ರೊಡಕ್ಷನ್ ಹೌಸ್‌ನೊಂದಿಗೆ ಧನುಷ್ ಅವರ ಮೂರನೇ ಸಹಯೋಗವಾಗಿದೆ.

ಶಿವರಾಜಕುಮಾರ್ ಕನ್ನಡ ಇಂಡಸ್ಟ್ರಿಯ ಅತ್ಯಂತ  ಜನಪ್ರಿಯ ನಟರಲ್ಲೊಬ್ಬರಾಗಿದ್ದಾರೆ. ನಿರ್ದೇಶಕ ಶ್ರೀನಿ ಜೊತೆಗಿನ ಘೋಸ್ಟ್ ಮತ್ತು ಯೋಗರಾಜ್ ಭಟ್ ಅವರ ಕರಟಕ ಧಮನಕ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.  ಸಂಗೀತ ನಿರ್ದೇಶಕ  ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಭೈರತಿ ರಣಗಲ್‌ ನಲ್ಲಿಯೂ ಶಿವಣ್ಣ ಅಭಿನಯಿಸುತ್ತಿದ್ದಾರೆ. ಇದು ಹಲವು ಭಾಷೆಗಳಲ್ಲಿ ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com