ಐತಿಹಾಸಿಕ ಹಿನ್ನೆಲೆಯ ಕತೆಯುಳ್ಳ 'ಕಬ್ಜ' ಚಿತ್ರದ ಭಾಗವಾಗಿರುವುದು ನನ್ನ ಅದೃಷ್ಟ: ಶ್ರಿಯಾ ಶರನ್
ಶ್ರಿಯಾ ಸರನ್ ಬಹುಭಾಷಾ ಕಲಾವಿದೆ, ಅಭಿನಯದಲ್ಲಿ ತಮ್ಮ ಶಕ್ತಿ ಸಾಬೀತುಪಡಿಸಿದ ನಟಿ, ತಮ್ಮ ವೃತ್ತಿಜೀವನದಲ್ಲಿ ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ ಅದ್ಭುತ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ತಮ್ಮ ಅಭಿಮಾನಿಗಳ ನಡುವೆ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ.
Published: 11th March 2023 02:26 PM | Last Updated: 13th March 2023 08:54 AM | A+A A-

ಕಬ್ಜ ಚಿತ್ರದಲ್ಲಿ ಶ್ರಿಯಾ ಶರನ್
ಶ್ರಿಯಾ ಶರನ್ ಬಹುಭಾಷಾ ಕಲಾವಿದೆ, ಅಭಿನಯದಲ್ಲಿ ತಮ್ಮ ಶಕ್ತಿ ಸಾಬೀತುಪಡಿಸಿದ ನಟಿ, ತಮ್ಮ ವೃತ್ತಿಜೀವನದಲ್ಲಿ ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ ಅದ್ಭುತ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ತಮ್ಮ ಅಭಿಮಾನಿಗಳ ನಡುವೆ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ.
ರಾಜಮೌಳಿ ನಿರ್ದೇಶನದ ಖ್ಯಾತ ಚಿತ್ರ ಆರ್‌ಆರ್‌ಆರ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದ ನಟಿ ದೃಶ್ಯಂ 2 ನಲ್ಲಿ ಕೂಡ ಮನಸೆಳೆದಿದ್ದರು. ಇದೀಗ ಪ್ಯಾನ್ ಇಂಡಿಯಾ ಚಿತ್ರ ಉಪೇಂದ್ರ ನಾಯಕ ನಟನಾಗಿ ನಟಿಸಿರುವ ಕಬ್ಜ ಚಿತ್ರದ ಮೇಲೆ ಅಪಾರ ಭರವಸೆ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಜೀವನದಲ್ಲಿ ನನ್ನನ್ನು ಈ ಹಂತಕ್ಕೆ ತಲುಪಿಸಿದ ಜನರಿಗೆ ಮತ್ತು 'ಶ್ರೀಕೃಷ್ಣ' ಪರಮಾತ್ಮನಿಗೆ ಕೃತಜ್ಞನಾಗಿದ್ದೇನೆ ಎನ್ನುತ್ತಾರೆ.
ನಾನು ಮಾಡುವ ಕೆಲಸದ ಬಗ್ಗೆ ನನಗೆ ಉತ್ಸಾಹವಿದೆ. ನಟಿಯಾಗಿರುವುದು ಅದೃಷ್ಟ ಮತ್ತು ಆಶೀರ್ವಾದ ಎಂದು ಭಾವಿಸುತ್ತೇನೆ. ಅದರಲ್ಲೂ ಪಕ್ಕದ ಮನೆಯ ಹುಡುಗಿಯೊಬ್ಬಳು ಹಲವು ಪಾತ್ರಗಳ ಮೂಲಕ ಹಲವು ಕಥೆಗಳನ್ನು ಹೇಳುವುದು ಯಾವಾಗಲೂ ವಿಶೇಷವೆನಿಸುತ್ತದೆ ಎಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕಬ್ಜ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಶ್ರೀಯಾ ಒಪ್ಪಿಕೊಳ್ಳುತ್ತಾರೆ. ಸ್ಕ್ರಿಪ್ಟ್ ಆಯ್ಕೆಯ ಪ್ರಕ್ರಿಯೆಯು ಮದುವೆಯ ನಂತರ ಮತ್ತು ಮಗುವಾದ ನಂತರ ಬದಲಾಗಿದೆಯೇ ಎಂದು ಕೇಳಿದ್ದಕ್ಕೆ, ನಿಜವಾಗಿಯೂ ಇಲ್ಲ, ಆದರೆ ಸಿನಿಮಾ ಮಾಡುವವರು ಸಿನಿಮಾ ಮಾಡಲು ಆರಂಭಿಸಿದ ರೀತಿ ಬದಲಾಗಿದೆ ಎಂದರು.

ಕನ್ನಡಕ್ಕೆ ಬಂದಾಗ, ಶ್ರಿಯಾ ಶರನ್ ಸ್ಯಾಂಡಲ್‌ವುಡ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅರಸು (ಅತಿಥಿ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು ಮತ್ತು ಕಬ್ಜಾ ಸೇರಿ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ನಾನು ತಮಿಳು ಮತ್ತು ತೆಲುಗು ನಡುವೆ ಹಿಂದಿ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿ ಸಿನಿಮಾ ಆರಂಭ ಮತ್ತು ಮುಕ್ತಾಯದಿಂದ ಕನಿಷ್ಠ ಆರು ತಿಂಗಳ ಸಮಯ ಬೇಕಾಗುತ್ತದೆ, ಮತ್ತು ಕೆಲವೊಮ್ಮೆ ಒಂದು ವರ್ಷ ಬೇಕಾಗುತ್ತದೆ. ಪ್ರತಿಯೊಂದು ಭಾಷೆಯ ನಡುವೆ ಯಾವಾಗಲೂ ಅಂತರವಿತ್ತು ಎಂದು ತಮ್ಮ ಸಿನಿಮಾ ನಟನೆ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಕಬ್ಜದಲ್ಲಿ ನನ್ನ ಅತಿಥಿ ಪಾತ್ರ ಅಚ್ಚರಿಯ ಪ್ಯಾಕೇಜ್ ಆಗಿರುತ್ತದೆ: ನಟ ಶಿವರಾಜ್‌ಕುಮಾರ್
ಇದು ನನ್ನ ಎರಡನೇ ಚಿತ್ರವಾಗಿದೆ. ನನ್ನ ಮೊದಲ ಕನ್ನಡ ಸಹನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಬಿಡುಗಡೆಯಾಗುತ್ತಿದೆ, ನನಗೆ ಅವರು ಅತ್ಯಂತ ಪ್ರೀತಿಯ ನಟ. ಮಾರ್ಚ್ 17 ನಮಗೆ ಮತ್ತು ಇಡೀ ಕನ್ನಡ ಇಂಡಸ್ಟ್ರಿಗೆ ಒಂದು ದೊಡ್ಡ ದಿನ ಎಂದರು.
ಶ್ರಿಯಾ ನಾಯಕಿ ಎಂದು ಘೋಷಿಸುವ ಮೊದಲು ಕಬ್ಜಾಗೆ ಟಾಪ್ ನಾಯಕಿಯರು ಸೇರುವ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು. ಇದಕ್ಕೆ ತಾವು ಹೇಗೆ ಆಯ್ಕೆಯಾದಿರಿ ಎಂದು ಕೇಳಿದಾಗ, ನಾನು ಪಾತ್ರವನ್ನು ಪ್ರೀತಿಸುತ್ತೇನೆ ಮತ್ತು ನಿರ್ದೇಶಕರು ಸ್ತ್ರೀ ಪಾತ್ರವನ್ನು ಚಿತ್ರಿಸಿದ ರೀತಿ ಇಷ್ಟವಾಯಿತು. ಚಂದ್ರು ಅವರು ಚಿತ್ರ ನಿರ್ದೇಶಕರಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕೆಂಬ ಅವರ ತೀವ್ರತೆ ಕಂಡು ಅಚ್ಚರಿಯಾಯಿತು.
ಇದನ್ನೂ ಓದಿ: ಉಪೇಂದ್ರ ಜೊತೆ ಕೆಲಸ ಮಾಡುವುದು ಜೀವಮಾನದ ಅವಕಾಶ: ನಟ ಅನೂಪ್ ರೇವಣ್ಣ
ನಾನು ಕನ್ನಡದಲ್ಲಿ ಪುನರಾಗಮನವನ್ನು ಮಾಡಲು ಬಯಸಿದ್ದೆ, ಅದು ಪ್ಯಾನ್-ಇಂಡಿಯಾ ಚಿತ್ರ ಕಬ್ಜವಾಗಿದ್ದು ಖುಷಿಯಾಯಿತು. ನನಗೂ ಉಪೇಂದ್ರ ಮತ್ತು ಸುದೀಪ್ ಜೊತೆ ಕೆಲಸ ಮಾಡುವ ಆಸೆ ಇತ್ತು. ಕಬ್ಜಾ ಒಂದು ಕಾಂಬೊ ಆಫರ್ ಆಗಿತ್ತು. ನನಗೆ ಸಂತೋಷವಾಗಿದೆ, ನಾನು ಅದರ ಭಾಗವಾಗಿದ್ದೇನೆ ಎಂದು ಹೇಳುವುದು ಹೆಮ್ಮೆಯಾಗುತ್ತಿದೆ ಎಂದರು ಶ್ರಿಯಾ ಶರಣ್ .