ಮಾರ್ಚ್ 17ಕ್ಕೆ ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ 'ಕಬ್ಜ' ಬಿಡುಗಡೆ
ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಇದೇ ತಿಂಗಳ 17 ರಂದು ತೆರೆಗೆ ಅಪ್ಪಳಿಸಲಿದೆ. ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕೆಜಿಎಫ್-2, ಕಾಂತಾರ ನಂತರ ಮತ್ತೊಂದು ಕನ್ನಡ ಸಿನಿಮಾ ದೇಶಾದ್ಯಂತ ಸಿನಿ ರಸಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
Published: 13th March 2023 04:08 PM | Last Updated: 13th March 2023 04:55 PM | A+A A-

ಕಬ್ಜ ಚಿತ್ರದ ಫೋಸ್ಟರ್
ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಇದೇ ತಿಂಗಳ 17 ರಂದು ತೆರೆಗೆ ಅಪ್ಪಳಿಸಲಿದೆ. ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕೆಜಿಎಫ್-2, ಕಾಂತಾರ ನಂತರ ಮತ್ತೊಂದು ಕನ್ನಡ ಸಿನಿಮಾ ದೇಶಾದ್ಯಂತ ಸಿನಿ ರಸಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಈಗಾಗಲೇ ಮುಂಬೈ, ಹೈದ್ರಾಬಾದ್, ಸೇರಿದಂತೆ ದೇಶದ ಹಲವಡೆ ಭರ್ಜರಿ ಪ್ರಚಾರ ನಡೆಸಿರುವ ಚಿತ್ರತಂಡ, ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 17 ರಂದು ಸಿನಿಮಾ ತೆರೆ ಕಾಣಲಿದೆ ಎಂದು ನಿರ್ದೇಶಕ ಚಂದ್ರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ 4,000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
The highly anticipated #Kabzaa the big thing in Indian cinemas hitting the silver screen on March 17, 2023 , in #4000 Theaters in multiple languages across the world .@NimmaShivanna @nimmaupendra @kichchasudeepa @rchandru_movies @anandpandit63 @apmpictures pic.twitter.com/dTGoPTEIvG
— R.Chandru (@rchandru_movies) March 13, 2023
ಎಂಟಿಬಿ ನಾಗರಾಜ್ ಪ್ರಸ್ತುತಪಡಿಸಿದ ಮತ್ತು ಸಿದ್ಧೇಶ್ವರ ಎಂಟರ್‌ಪ್ರೈಸಸ್ ಅಡಿಯಲ್ಲಿ ಚಂದ್ರು ನಿರ್ಮಿಸಿರುವ ಚಿತ್ರದಲ್ಲಿ ಶ್ರೀಯಾ ಶರಣ್ ನಾಯಕಿಯಾಗಿದ್ದು, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ಕಬೀರ್ ದುಹಾನ್ ಸಿಂಗ್, ಜಯಪ್ರಕಾಶ್ ಮತ್ತು ಕೋಟಾ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲಷ್ಟೇ ಅಲ್ಲ, ತಮಿಳು, ಮಲಯಾಳಂ, ತೆಲುಗಿನಲ್ಲೂ ಕಬ್ಜ ಸಿನಿಮಾಗೆ ಭಾರಿ ಬೇಡಿಕೆ
ಕಬ್ಜ ಸಿನಿಮಾದ ತಾಂತ್ರಿಕ ತಂಡದಲ್ಲಿ ಕ್ಯಾಮೆರಾದ ಹಿಂದೆಎಜೆ ಶೆಟ್ಟಿ ಮತ್ತು ಸಂಕಲನಕಾರರಾಗಿ ಮಹೇಶ್ ಎಸ್ ರೆಡ್ಡಿ ಮತ್ತು ಸಂಗೀತ ನಿರ್ದೇಶಕರಾಗಿ ರವಿ ಬಸ್ರೂರ್ ಅವರನ್ನು ಒಳಗೊಂಡಿದೆ.