ಕನ್ನಡದಲ್ಲಷ್ಟೇ ಅಲ್ಲ, ತಮಿಳು, ಮಲಯಾಳಂ, ತೆಲುಗಿನಲ್ಲೂ ಕಬ್ಜ ಸಿನಿಮಾಗೆ ಭಾರಿ ಬೇಡಿಕೆ
ನಿರ್ದೇಶಕ ಆರ್ ಚಂದ್ರು ಅವರ ಕಬ್ಜಾದ ಪ್ರೀ-ರಿಲೀಸ್ ಕಾರ್ಯಕ್ರಮ ಕನ್ನಡದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಭಾರಿ ಕ್ರೇಜ್ ಹುಟ್ಟುಹಾಕಿದೆ. ಉಪೇಂದ್ರ ಅಭಿನಯದ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸುದೀಪ್ ಮತ್ತು ಶಿವರಾಜಕುಮಾರ್ ಕೂಡ ನಟಿಸಿದ್ದಾರೆ. ಇದು ದೇಶದಾದ್ಯಂತ ದೊಡ್ಡ ವಿತರಕರಿಂದ ಬಿಡುಗಡೆಯಾಗುತ್ತಿದೆ.
Published: 10th March 2023 10:41 AM | Last Updated: 10th March 2023 10:50 AM | A+A A-

ಕಬ್ಜ ಸಿನಿಮಾ ಪೋಸ್ಟರ್
ನಿರ್ದೇಶಕ ಆರ್ ಚಂದ್ರು ಅವರ ಕಬ್ಜಾದ ಪ್ರೀ-ರಿಲೀಸ್ ಕಾರ್ಯಕ್ರಮ ಕನ್ನಡದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಭಾರಿ ಕ್ರೇಜ್ ಹುಟ್ಟುಹಾಕಿದೆ. ಉಪೇಂದ್ರ ಅಭಿನಯದ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸುದೀಪ್ ಮತ್ತು ಶಿವರಾಜಕುಮಾರ್ ಕೂಡ ನಟಿಸಿದ್ದಾರೆ. ಇದು ದೇಶದಾದ್ಯಂತ ದೊಡ್ಡ ವಿತರಕರಿಂದ ಬಿಡುಗಡೆಯಾಗುತ್ತಿದೆ.
ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಕಬ್ಜಾದ ಹಿಂದಿ ಆವೃತ್ತಿಯನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ನಾವು ಈ ಮೊದಲೇ ವರದಿ ಮಾಡಿದ್ದೇವೆ. ಇದೀಗ ಸುಧಾಕರ್ ರೆಡ್ಡಿ ಮತ್ತು ಬಾಂಬೆ ರಮೇಶ್ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ವಿತರಣೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಹೊಸ ವಿಚಾರವೆಂದರೆ, ಲೈಕಾ ಪ್ರೊಡಕ್ಷನ್ ತಮಿಳು ಆವೃತ್ತಿಯನ್ನು ವಿತರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಈ ಕುರಿತು ಪ್ರಕಟಣೆ ನೀಡಿರುವ ನಿರ್ಮಾಣ ಸಂಸ್ಥೆಯು, 'ಈ ವಿಚಾರವನ್ನು ಘೋಷಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಸುಬಾಸ್ಕರನ್ ತಮಿಳುನಾಡಿನಾದ್ಯಂತ ಕಬ್ಜ ಸಿನಿಮಾವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಾರೆ. ಮಾರ್ಚ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ' ಎಂದಿದೆ.
ಇದನ್ನೂ ಓದಿ: ಕಬ್ಜಾದಲ್ಲಿ ನನ್ನ ಅತಿಥಿ ಪಾತ್ರ ಅಚ್ಚರಿಯ ಪ್ಯಾಕೇಜ್ ಆಗಿರುತ್ತದೆ: ನಟ ಶಿವರಾಜ್‌ಕುಮಾರ್
ಈಮಧ್ಯೆ, ಎಂಟಿಬಿ ನಾಗರಾಜ್ ಪ್ರಸ್ತುತಪಡಿಸಿದ ಮತ್ತು ಸಿದ್ಧೇಶ್ವರ ಎಂಟರ್‌ಪ್ರೈಸಸ್ ಅಡಿಯಲ್ಲಿ ಚಂದ್ರು ನಿರ್ಮಿಸಿರುವ ಚಿತ್ರವನ್ನು ಅಲಂಕಾರ್ ಪಾಂಡಿಯನ್ ಸಹಯೋಗದಲ್ಲಿ ರಮೇಶ್ ವ್ಯಾಸ್ ಒಡೆತನದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಎಲ್‌ಜಿಎಫ್ ಸ್ಟುಡಿಯೋಸ್ ಮಲಯಾಳಂನಲ್ಲಿ ವಿತರಿಸಲಿದೆ.
ಸ್ಯಾಂಡಲ್‌ವುಡ್ ಮಾರುಕಟ್ಟೆಯು ಸದ್ದು ಮಾಡುತ್ತಿದೆ. ಏಕೆಂದರೆ, ಚಿತ್ರವು ಬಿಡುಗಡೆಗೆ ಮುನ್ನವೇ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳ ರೂಪದಲ್ಲಿ ಎಲ್ಲಾ ಭಾಷೆಗಳಲ್ಲಿ100 ಕೋಟಿ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಆದಾಗ್ಯೂ, ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ದೃಢೀಕರಣವನ್ನು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಉಪೇಂದ್ರ ಜೊತೆ ಕೆಲಸ ಮಾಡುವುದು ಜೀವಮಾನದ ಅವಕಾಶ: ನಟ ಅನೂಪ್ ರೇವಣ್ಣ
ಬಹು ನಿರೀಕ್ಷಿತ ಚಿತ್ರದಲ್ಲಿ ಶ್ರೀಯಾ ಶರಣ್ ನಾಯಕಿಯಾಗಿ, ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ಕಬೀರ್ ದುಹಾನ್ ಸಿಂಗ್, ಜಯಪ್ರಕಾಶ್ ಮತ್ತು ಕೋಟಾ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಬ್ಜ ಸಿನಿಮಾದ ತಾಂತ್ರಿಕ ತಂಡದಲ್ಲಿ ಕ್ಯಾಮೆರಾದ ಹಿಂದೆ ಎಜೆ ಶೆಟ್ಟಿ ಮತ್ತು ಸಂಕಲನಕಾರರಾಗಿ ಮಹೇಶ್ ಎಸ್ ರೆಡ್ಡಿ ಮತ್ತು ಸಂಗೀತ ನಿರ್ದೇಶಕರಾಗಿ ರವಿ ಬಸ್ರೂರ್ ಅವರನ್ನು ಒಳಗೊಂಡಿದೆ.