‘ಉಂಡೆನಾಮ’ ಹಾಕೋಕೆ ರೆಡಿಯಾಗಿದ್ದಾರೆ ಕೋಮಲ್‌: ರಿಲೀಸ್ ಡೇಟ್ ಫಿಕ್ಸ್!

ಸಂಭಾಷಣೆಕಾರ ಕೆ.ಎಲ್ ರಾಜಶೇಖರ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ನಟ ಕೋಮಲ್ ಅಭಿನಟಿಸಿದ್ದು  ಏಪ್ರಿಲ್ 14 ರಂದು ರಿಲೀಸ್ ಆಗಲಿದೆ.
ಕೋಮಲ್
ಕೋಮಲ್

ಸಂಭಾಷಣೆಕಾರ ಕೆ.ಎಲ್ ರಾಜಶೇಖರ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ನಟ ಕೋಮಲ್ ಅಭಿನಟಿಸಿದ್ದು  ಏಪ್ರಿಲ್ 14 ರಂದು ರಿಲೀಸ್ ಆಗಲಿದೆ.

ಈ ಬಾರಿ ಕೋಮಲ್‌ ‘ಉಂಡೆನಾಮ’ ಹಿಡಿದುಕೊಂಡು ಬಂದಿದ್ದಾರೆ. ಚಿತ್ರದ ಶೀರ್ಷಿಕೆ ಇತ್ತೀಚೆಗೆ ಘೋಷಣೆಯಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕೋಮಲ್ ಅವರ ಜತೆ ಹರೀಶ್ ರಾಜ್, ಧನ್ಯಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವಾ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಕ್ ಜನಾರ್ದನ್‌ ನಟಿಸಿದ್ದಾರೆ.

ಈ ಚಿತ್ರವನ್ನು ಎನ್.ಕೆ. ಸ್ಟುಡಿಯೋಸ್ ಲಾಂಛನದ ಅಡಿಯಲ್ಲಿ ಸಿ.ನಂದಕಿಶೋರ್ ಅವರು ನಿರ್ಮಿಸಿದ್ದಾರೆ. ಕೆ.ಎಲ್.ರಾಜಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಸಂಭ್ರಮ ಅವರ ಸಂಗೀತ, ನವೀನ್‌ ಕುಮಾರ್ ಛಾಯಾಗ್ರಾಹಣ, ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೆ  ರಾಜಶೇಖರ್ ಸಂಭಾಷಣೆ ಬರೆದು ಪ್ರಸಿದ್ಧರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com