
ಶ್ರೇಯಸ್ ಮಂಜು
ಕಮರ್ಷಿಯಲ್ ಎಂಟರ್‌ಟೈನರ್, ಪಡ್ಡೆಹುಲಿಯೊಂದಿಗೆ ಪಾದಾರ್ಪಣೆ ಮಾಡಿದ ನಟ ಶ್ರೇಯಸ್ ಮಂಜು ನಂತರ ರಾಣಾ ದೊಂದಿಗೆ ಔಟ್-ಅಂಡ್-ಔಟ್ ಆಕ್ಷನ್ ಚಿತ್ರವನ್ನು ಮಾಡಿದ್ದರು. ಇದೀಗ ಶ್ರೇಯಸ್ ಮಂಜು ಹಲವು ಪ್ರಯೋಗಗಳನ್ನು ಮಾಡುತ್ತಿದ್ದು ಕಾಲೇಜು ಲವ್ ಸ್ಟೋರಿಯಲ್ಲಿ ಅಭಿನಯಿಸುತ್ತಿದ್ದಾರೆ.
ಶ್ರೇಯಸ್ ಮಂಜು ತಮ್ಮ ಮುಂದಿನ ವಿಷ್ಣು ಪ್ರಿಯಾ ಬಿಡುಗಡೆಗಾಗಿ ಕಾಯುತ್ತಿದ್ದು ಇದೊಂದು ಪ್ರೇಮಕಥೆ ಎಂದು ಬಿಂಬಿಸಲಾಗಿದೆ. ಇದೀಗ ಕಾಲೇಜು ಪ್ರೇಮಕಥೆಯಲ್ಲಿ ಅವರು ನಟಿಸಲು ಸಿದ್ಧರಾಗಿದ್ದು ಆ ಚಿತ್ರಕ್ಕೆ ಇತ್ತೀಚೆಗೆ ಸಹಿ ಹಾಕಿದ್ದಾರೆ.
ಈ ಹಿಂದೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್‌ಗೆ ಸಹಾಯಕರಾಗಿ ಕೆಲಸ ಮಾಡಿದ್ದ ಮಧು ಗೌಡ ಗಂಗೂರ್ ಅವರು ಈ ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರವೇಶವನ್ನು ಗುರುತಿಸಿದ್ದಾರೆ. ನಿರ್ಮಾಪಕರು ನಾಲ್ಕು ನಾಯಕಿಯರನ್ನು ಶಾರ್ಟ್‌ಲಿಸ್ಟ್ ಮಾಡಿದ್ದು ಶೀಘ್ರದಲ್ಲೇ ನಾಯಕಿಯನ್ನು ಅಂತಿಮಗೊಳಿಸಲಿದ್ದಾರೆ. ಇನ್ನುಳಿದ ಪಾತ್ರವರ್ಗವನ್ನು ಕೂಡ ಚಿತ್ರತಂಡ ಅಂತಿಮಗೊಳಿಸಲಿದೆ.
ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಶೂಟಿಂಗ್ ಪೂರ್ಣ: ಇದೊಂದು ಅದ್ಭುತ ಅನುಭವ ಎಂದ ಹೇಮಂತ್ ರಾವ್
ಏನ್ಷಿಯಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಆರ್ ಸಂತೋಷ್ ಕುಮಾರ್ ಅವರು ನಿರ್ಮಿಸಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಗಗನ್ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರವು ಏಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಇನ್ನು ಬೆಂಗಳೂರು, ಚಿಕ್ಕಮಗಳೂರು, ಕೊಡಗು ಮತ್ತು ಕೇರಳದ ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.