'ದಸರಾ' ಸಿನಿಮಾ ಚಿತ್ರತಂಡದ 130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್!

ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ನಟಿ ಕೀರ್ತಿ ಸುರೇಶ್, ತನ್ನ ಗೆಲುವಿಗೆ ಕಾರಣರಾಗುತ್ತಿರುವ ವ್ಯಕ್ತಿಗಳಿಗೆ ಬರೋಬ್ಬರಿ 75 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ಚಿನ್ನದ ನಾಣ್ಯವನ್ನು ನೀಡಿದ್ದಾರೆ.
ಕೀರ್ತಿ ಸುರೇಶ್
ಕೀರ್ತಿ ಸುರೇಶ್
Updated on

ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ನಟಿ ಕೀರ್ತಿ ಸುರೇಶ್, ತನ್ನ ಗೆಲುವಿಗೆ ಕಾರಣರಾಗುತ್ತಿರುವ ವ್ಯಕ್ತಿಗಳಿಗೆ ಬರೋಬ್ಬರಿ 75 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಯುಗಾದಿ ಹಬ್ಬಕ್ಕಾಗಿ ಅವರು ಈ ಉಡುಗೊರೆಯನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಮಾಡಿರೋ ಈ ಕೆಲಸಕ್ಕೆ ಇಡೀ ದಸರಾ ಟೀಂ ವಾವಾ ಎನ್ನುತ್ತಿದೆ. ಕೀರ್ತಿ ಸುರೇಶ್ ಮೂಲತಃ ಮಲಯಾಳಂ ಚಿತ್ರರಂಗದವರಾದರೂ, ಟಾಲಿವುಡ್‌ನಲ್ಲೇ ಹೆಚ್ಚು ಸಕ್ರಿಯರಾಗಿದ್ದಾರೆ. ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿದ್ದು ಕೂಡ ತೆಲುಗಿನ 'ಮಹಾನಟಿ' ಸಿನಿಮಾ. ಇದೀಗ ಅವರು ತೆಲುಗಿನ 'ದಸರಾ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾನಿ ಈ ಸಿನಿಮಾದ ಹೀರೋ. ಸದ್ಯ ಒಂದು ವಿಚಾರಕ್ಕೆ ಕೀರ್ತಿ ಸುರೇಶ್ ಸಖತ್ ಸುದ್ದಿಯಲ್ಲಿದ್ದಾರೆ.

ಲಕ್ಷಾಂತರ  ರು. ಮೌಲ್ಯದ ಚಿನ್ನದ ನಾಣ್ಯಗಳನ್ನು 130 ಮಂದಿಗೆ ಕೀರ್ತಿ ಸುರೇಶ್ ನೀಡಿದ್ದಾರಂತೆ! ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ದಸರಾ' ಸಿನಿಮಾದಲ್ಲಿ ವನ್ನೆಲಾ ಎಂಬ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಇದೊಂದು ಡಿಗ್ಲಾಮರಸ್ ಪಾತ್ರ. ಈ ಸಿನಿಮಾದ ತಂಡದ ಮೇಲೆ ಕೀರ್ತಿಗೆ ಅದೇನೋ ವಿಶೇಷ ಪ್ರೀತಿ.

ಹಾಗಾಗಿ, ಚಿತ್ರಕ್ಕಾಗಿ ಕೆಲಸ ಮಾಡಿದ ಸುಮಾರು 130 ಜನರಿಗೆ 10 ಗ್ರಾಂ ತೂಕದ ಒಂದೊಂದು ಚಿನ್ನದ ನಾಣ್ಯಗಳನ್ನು ಕೀರ್ತಿ ಸುರೇಶ್ ನೀಡಿದ್ದಾರೆ ಎನ್ನಲಾಗಿದೆ. ಈ ಚಿನ್ನದ ನಾಣ್ಯಗಳ ಒಟ್ಟು ಮೌಲ್ಯ 70ರಿಂದ 75 ಲಕ್ಷ ರೂ. ಎಂದು ತಿಳಿದುಬಂದಿದೆ. ಚಿತ್ರೀಕರಣದ ಕೊನೆಯ ದಿನ ಕೀರ್ತಿ ಸುರೇಶ್ ಅವರು ಈ ಚಿನ್ನದ ನಾಣ್ಯಗಳನ್ನು ನೀಡಿದ್ದಾರಂತೆ. ತನಗೆ ದಸರಾ ಸಿನಿಮಾದಲ್ಲಿ ಬಂದ ಸಂಭಾವನೆಯನ್ನು ಇಡೀ ಚಿತ್ರತಂಡಕ್ಕಾಗಿಯೇ ಖರ್ಚು ಮಾಡಿದ ಏಕೈಕ ನಟಿ ಕೀರ್ತಿ ಸುರೇಶ್.

ನಿಜಕ್ಕೂ ನೀವು ರಿಯಲ್ ಲೈಫಲ್ಲೂ ಮಹಾನಟಿಯೇ ಎಂದು ಚಿತ್ರತಂಡ ಬಣ್ಣಿಸುತ್ತಿದೆ. 'ಕೀರ್ತಿ ಸುರೇಶ್ ಅವರು ಕೊನೆಯ ದಿನದ ಶೂಟಿಂಗ್ ವೇಳೆ ತುಂಬ ಭಾವುಕರಾಗಿದ್ದರು. ತಮಗೆ ಇಂಥದ್ದೊಂದು ಸಿನಿಮಾ ನೀಡಿದ್ದಕ್ಕಾಗಿ ಚಿತ್ರತಂಡದ ಸದಸ್ಯರಿಗೆ ಏನಾದರೂ ವಿಶೇಷವಾದದ್ದನ್ನು ನೀಡಬೇಕು ಎಂದು ಅವರು ಅಂದುಕೊಂಡಿದ್ದರು' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com