
ಚಕ್ರವರ್ತಿ ಚಂದ್ರಚೂಡ್ ಮತ್ತು ರಾಜವರ್ಧನ್
ಪ್ರಣಯಂ, ಗಜರಾಮ ಮುಂತಾದ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ರಾಜವರ್ಧನ್ ಮುಂದಿನ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಆಗಿದೆ.
ನಟ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ಐ ಆಮ್ ಕಲ್ಕಿ ಎಂಬ ಟೈಟಲ್ ನ ಚಿತ್ರದಲ್ಲಿ ರಾಜವರ್ಧನ್ ನಟಿಸಲಿದ್ದಾರೆ. ರಾಜವರ್ಧನ್ ಹುಟ್ಟು ಹಬ್ಬದಂದು ಈ ಕುರಿತು ಘೋಷಣೆ ಹೊರಡಿಸಲಾಗಿದೆ.
ರಾಜವರ್ಧನ್ ಅವರು ಈಗ ಪ್ರಿಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವನ್ನು ತಮ್ಮ ನಟನಾ ವೃತ್ತಿಜೀವನದ ಅತ್ಯುತ್ತಮ ಸ್ಕ್ರಿಪ್ಟ್‌ಗಳಲ್ಲಿ ಒಂದೆಂದು ಹೇಳಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ನಟಿಸಲು ನಿರ್ದೇಶಕ ಚಂದ್ರಚೂಡ್ ಅವರು ಕಥೆ ಬರೆದಿರುವುದು ಪ್ರಮುಖ ಕಾರಣವಾಗಿದೆ,
ಇದನ್ನೂ ಓದಿ: ನಾನು ವಿಫಲವಾಗಿದ್ದ ಸ್ಥಳದಲ್ಲೇ ನನ್ನನ್ನು ಸಾಬೀತುಪಡಿಸಲು ಹೊರಟಿದ್ದೇನೆ: ನಟ ರಾಜವರ್ದನ್
ಪಾತ್ರಕ್ಕಾಗಿ ಟ್ರಾನ್ಸ್ ಫಾರ್ಮೇಷನ್ ಆಗಲು ಹೇಳಿದ್ದಾರೆ. ನಾನು ಈಗಾಗಲೇ ಕೆಲಸ ಪ್ರಾರಂಭಿಸಿದ್ದೇನೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ, ಆ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇವೆ. ಚಿತ್ರ, ಮತ್ತು ವಿಶೇಷವಾಗಿ ನನ್ನ ಪಾತ್ರದ ಬಗ್ಗೆ ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.
ಏತನ್ಮಧ್ಯೆ, ಚಿತ್ರದ ಬಿಡುಗಡೆಗೆ ಸಿದ್ಧವಾಗುತ್ತಿರುವ ಪ್ರಣಯಂ ನಿರ್ಮಾಪಕರು ಇತ್ತೀಚೆಗೆ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ. ನಾನು ಸದ್ಯ ಸುನೀಲ್ ಕುಮಾರ್ ನಿರ್ದೇಶನದ ಗಜರಾಮ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದೇನೆ ಎಂದು ರಾಜವರ್ಧನ್ ತಿಳಿಸಿದ್ದಾರೆ.