ನನಗೆ 99 ಸಮಸ್ಯೆಗಳಿವೆ, ಆದರೆ ಪತಿಯ ಸಮಸ್ಯೆ ಇಲ್ಲ: ಡಿವೋರ್ಸ್ ಫೋಟೋಶೂಟ್ ಮಾಡಿಸಿ ಸಂಭ್ರಮಿಸಿದ ನಟಿ!
ತಮಿಳು ನಟಿ ಶಾಲಿನಿ ಇತ್ತೀಚೆಗೆ ಪತಿಯಿಂದ ದೂರವಾಗಿದ್ದಾರೆ, ಆದರೆ ಎಲ್ಲರಂತೆ ಅಳುತ್ತಾ ಕೂರದೆ ನೋವಿನಿಂದ ಹೊರ ಬಂದು ಫೋಟೋ ಶೂಟ್ ಮಾಡಿಸಿ ಸಂಭ್ರಮಿಸಿದ್ದಾರೆ.
Published: 03rd May 2023 01:38 PM | Last Updated: 03rd May 2023 01:44 PM | A+A A-

ಶಾಲಿನಿ
ತಮಿಳು ನಟಿ ಶಾಲಿನಿ ಇತ್ತೀಚೆಗೆ ಪತಿಯಿಂದ ದೂರವಾಗಿದ್ದಾರೆ, ಆದರೆ ಎಲ್ಲರಂತೆ ಅಳುತ್ತಾ ಕೂರದೆ ನೋವಿನಿಂದ ಹೊರ ಬಂದು ಫೋಟೋ ಶೂಟ್ ಮಾಡಿಸಿ ಸಂಭ್ರಮಿಸಿದ್ದಾರೆ.
ಈ ಫೋಟೋಗಳನ್ನು ಶಾಲಿನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮೂಕರೋದನೆ ಅನುಭವಿಸುತ್ತಿರುವ ಮಹಿಳೆಯರಿಗೆ ವಿಚ್ಛೇದಿತ ಮಹಿಳೆ ನೀಡುತ್ತಿರುವ ಸಂದೇಶ ಎಂದು ಶಾಲಿನಿ ಬರೆದುಕೊಂಡಿದ್ದಾರೆ. ಕೆಟ್ಟ ದಾಂಪತ್ಯದಿಂದ ಹೊರ ಬರುವುದು ತಪ್ಪೇನಲ್ಲ. ಹಿಂದಿನದನ್ನು ಮರೆತು ನಿಮ್ಮ ಮಕ್ಕಳ ಭವಿಷ್ಯದ ಕಡೆಗೆ ಗಮನ ನೀಡಿ ಎಂದು ಶಾಲಿನಿ ಬರೆದುಕೊಂಡಿದ್ದಾರೆ.
ನನಗೆ 99 ಸಮಸ್ಯೆಗಳಿವೆ. ಆದರೆ ಅದರಲ್ಲಿ ಪತಿಯ ಸಮಸ್ಯೆ ಇಲ್ಲ ಎಂಬ ಬೋರ್ಡ್ ಹಿಡಿದು ಶಾಲಿನಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮತ್ತೊಂದು ಕೈನಲ್ಲಿ ವೈನ್ ಬಾಟಲ್ ಹಿಡಿದಿದ್ದಾರೆ.
ಶಾಲಿನಿ 2020 ರಲ್ಲಿ ರಿಯಾಜ್ ಎಂಬುವರನ್ನು ಮದುವೆಯಾಗಿದ್ದರು. ಈ ದಂಪತಿಗೆ ರಿಯಾ ಎಂಬ ಮಗಳಿದ್ದಾಳೆ. ಮದುವೆ ಹೊಸತರಲ್ಲಿ ಎಲ್ಲವೂ ಸರಿ ಇತ್ತು. ಆದರೆ ನಂತರ ಶಾಲಿನಿ ಪತಿಯಿಂದ ದೈಹಿಕ, ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಕೊನೆಗೆ ಇದು ವಿಚ್ಛೇದನದಲ್ಲಿ ಕೊನೆ ಆಗಿದೆ.
ಶಾಲಿನಿ ತಮಿಳಿನ 'ಮುಲ್ಲುಮ ಮರಲುಂ' ಧಾರಾವಾಹಿ ಮೂಲಕ ಕಿರುತೆರೆ ಪ್ರಿಯರಿಗೆ ಪರಿಚಯವಾಗಿದ್ದರು. ಇತ್ತೀಚೆಗೆ ಅವರು ತಮಿಳಿನ ಸೂಪರ್ ಮಾಮ್ ಕಾರ್ಯಕ್ರಮದಲ್ಲಿ ಮಗಳೊಂದಿಗೆ ಕಾಣಿಸಿಕೊಂಡಿದ್ದರು. ಮದುವೆ ದಿನ ತೆಗೆಸಿದ ಪತಿ ರಿಯಾಜ್ ಜೊತೆಗಿನ ಫೋಟೋವನ್ನು ಶಾಲಿನಿ ಹರಿದು ಹಾಕಿದ್ದಾರೆ.
ಪತಿಯಿಂದ ಮಾನಸಿಕ ದೈಹಿಕ ಹಿಂಸೆ ಅನುಭವಿಸಿರುವ ಶಾಲಿನಿ ಅವರಂತೆ ನೊಂದ ಇತರ ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ ಎಂದು ಹಲವರು ಶಾಲಿನಿ ಧೈರ್ಯವನ್ನು ಕೊಂಡಾಡಿದ್ದಾರೆ.