ಹಿರಿಯ ನಟ ಶರತ್ ಬಾಬು ಆರೋಗ್ಯದಲ್ಲಿ ಚೇತರಿಕೆ; ನಿಧನದ ವದಂತಿ ನಂಬಬೇಡಿ: ಕುಟುಂಬಸ್ಥರ ಮನವಿ
ಕನ್ನಡದ ಅಮೃತ ವರ್ಷಿಣಿ, ನಮ್ಮ ಯಜಮಾನ್ರು, ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಬಹುಭಾಷಾ ನಟ ಶರತ್ ಬಾಬು ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂಬುದಾಗಿ ವರದಿಯಾಗಿತ್ತು. ಆದರೆ ಇಂತಹ ವದಂತಿಗಳನ್ನು ನಂಬದಂತೆ ಅವರ ಕುಟುಂಬಸ್ಥರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
Published: 03rd May 2023 10:46 PM | Last Updated: 04th May 2023 02:39 PM | A+A A-

ನಟ ಶರತ್ ಬಾಬು
ಹೈದ್ರಾಬಾದ್: ಕನ್ನಡದ ಅಮೃತ ವರ್ಷಿಣಿ, ನಮ್ಮ ಯಜಮಾನ್ರು, ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಬಹುಭಾಷಾ ನಟ ಶರತ್ ಬಾಬು ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂಬುದಾಗಿ ವರದಿಯಾಗಿತ್ತು. ಆದರೆ ಇಂತಹ ವದಂತಿಗಳನ್ನು ನಂಬದಂತೆ ಅವರ ಕುಟುಂಬಸ್ಥರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಪ್ರಸ್ತುತ ಅವರು ವೈದ್ಯಕೀಯ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು. ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ ಎಂದು ಶರತ್ ಬಾಬು ಅವರ ಸಹೋದರಿ ಹೇಳಿದ್ದಾರೆ. ಶರತ್ ಬಾಬು ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ವದಂತಿಗಳನ್ನು ನಂಬಬೇಡಿ ಎಂದು ಅವರು ಹೇಳಿದ್ದಾರೆ.
ಇತ್ತೀಚಿಗೆ ನಟ ಶರತ್ ಬಾಬು ದಿಢೀರ್ ಅಸ್ವಸ್ಥರಾಗಿದ್ದ ಹಿನ್ನೆಲೆ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ನಟನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಬೆಂಗಳೂರಿನಿಂದ ಹೈದರಾಬಾದ್ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
While rumours about actor #SarathBabu's passing have been circulating on social media, his PR has stated that he is doing well and is recovering. Everyone has been asked not to believe any news posted on social media by the family. pic.twitter.com/S0jswWladO
— Chennai Memes (@MemesChennai) May 3, 2023
ಶರತ್ ಬಾಬು 1951ರ ಜುಲೈ 31ರಂದು ಶ್ರೀಕಾಕುಳಂ ಜಿಲ್ಲೆಯ ಅಮುದಲಾದಲ್ಲಿ ಜನಿಸಿದರು. ತೆಲುಗಿನ ರಾಮರಾಜ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.