
ಜೈಲರ್ ಚಿತ್ರದಲ್ಲಿ ರಜಿನಿಕಾಂತ್
ಮುಂಬೈ: ಮೆಗಾಸ್ಟಾರ್ ರಜಿನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ 'ಜೈಲರ್' ಆಗಸ್ಟ್ 10 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಚಿತ್ರದ ಬಿಡುಗಡೆ ದಿನಾಂಕ ಮತ್ತು ಟೀಸರ್ ಅನ್ನು ಸನ್ ಪಿಕ್ಚರ್ಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
#Jailer is all set to hunt from August 10th @rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi @kvijaykartik @Nirmalcuts @KiranDrk @StunShiva8 #JailerFromAug10 pic.twitter.com/Wb7L0akJ4k
— Sun Pictures (@sunpictures) May 4, 2023
'ಜೈಲರ್ ಆಗಸ್ಟ್ 10ರಂದು ಬೇಟೆಯಾಡಲು ಸಿದ್ಧವಾಗಿದ್ದಾರೆ' ಎಂಟು ಸನ್ ಪಿಕ್ಚರ್ಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಗುರುವಾರ ತಿಳಿಸಲಾಗಿದೆ.
ಜೈಲರ್‌ನಲ್ಲಿ ಮಲಯಾಳಂ ನಟ ಮೋಹನ್‌ಲಾಲ್, ನಟಿ ತಮನ್ನಾ ಭಾಟಿಯಾ, ಜಾಕಿ ಶ್ರಾಫ್, ಸ್ಯಾಂಡಲ್‌ವುಡ್ ನಟ ಡಾ. ಶಿವ ರಾಜ್‌ಕುಮಾರ್, ನಟಿ ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಜೈಲರ್ ಸಿನಿಮಾ ಸೆಟ್ ನಲ್ಲಿ ಶಿವಣ್ಣ, ಎಕ್ಸ್ಕ್ಲೂಸಿವ್ ಫೋಟೋ ರಿವೀಲ್!
ನೆಲ್ಸನ್ ತಾವೇ ಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಜಯ್ ನಟನೆಯ ಬೀಸ್ಟ್ ಸಿನಿಮಾ ಸನ್ ಪಿಕ್ಚರ್ಸ್ ಜೊತೆಗಿನ ಅವರ ಎರಡನೇ ಸಹಯೋಗ ಜೈಲರ್ ಆಗಿದೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಸೆಟ್ ಗೆ ಹಾಜರಾದ ಶಿವರಾಜ್ ಕುಮಾರ್!
ರಜನಿಕಾಂತ್ ಕೊನೆಯದಾಗಿ 2021 ರ 'ಅನ್ನಾತ್ತೆ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ನಯನತಾರಾ, ಖುಷ್ಬು ಮತ್ತು ಕೀರ್ತಿ ಸುರೇಶ್ ಕೂಡ ಕಾಣಿಸಿಕೊಂಡಿದ್ದರು.