ಪುನೀತ್ ರುದ್ರನಾಗ್ ನಿರ್ದೇಶನದ ಕಮರ್ಷಿಯಲ್ ಚಿತ್ರದಲ್ಲಿ 'ಬನಾರಸ್' ಹೀರೋ ಝೈದ್ ಖಾನ್!
ನಿರ್ದೇಶಕ ಜಯತೀರ್ಥ ಅವರ ಬನಾರಸ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಜೈದ್ ಖಾನ್ ತಮ್ಮ ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ, ಇದು ಪುನೀತ್ ರುದ್ರನಾಗ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.
Published: 11th May 2023 11:06 AM | Last Updated: 11th May 2023 02:24 PM | A+A A-

ಝೈದ್ ಖಾನ್
ನಿರ್ದೇಶಕ ಜಯತೀರ್ಥ ಅವರ ಬನಾರಸ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಜೈದ್ ಖಾನ್ ತಮ್ಮ ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ, ಇದು ಪುನೀತ್ ರುದ್ರನಾಗ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.
ಬನಾರಸ್ ನಟನ ಎರಡನೇ ಸಿನಿಮಾ ರೋಮಾಂಚಕ ಆಕ್ಷನ್-ಪ್ಯಾಕ್ಡ್ ಕಥೆಯಾಗಿದೆ. ಈ ಸಿನಿಮಾ ನನ್ನ ಚೊಚ್ಚಲ ಚಿತ್ರ ಬನಾರಸ್‌ಗೆ ವ್ಯತಿರಿಕ್ತವಾಗಿರುತ್ತದೆ. ಕಮರ್ಷಿಯಲ್ ಕಥೆಯ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ, ಎಂದು ಜೈದ್ ಖಾನ್ ಹೇಳಿದ್ದಾರೆ.
ಈ ಹಿಂದೆ ಕೆಜಿಎಫ್ ಚಾಪ್ಟರ್ -1 ರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್, ಯುವರಾಜಕುಮಾರ್ ಅವರೊಂದಿಗೆ ಸಿನಿಮಾ ನಿರ್ದೇಶಿಸಬೇಕಿತ್ತು ಆದರೆ ಹಲವು ಕಾರಣಗಳಿಂದ ಪ್ರಾಜೆಕ್ಟ್ ಪ್ರಾರಂಭವಾಗಲಿಲ್ಲ. ಈಗ, ಝೈದ್ ಖಾನ್ ಅವರೊಂದಿಗಿನ ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾ ಆರಂಭಿಸುತ್ತಿದ್ದಾರೆ. ಸಿನಿಮಾಗೆ ಕಥೆ ಮತ್ತು ಚಿತ್ರಕಥೆಯನ್ನು ಭಗೀರತ್ ಬರೆದಿದ್ದಾರೆ.
ಈ ಪ್ರಾಜೆಕ್ಟ್ ಇನ್ನೂ ಆರಂಭಿಕ ಹಂತದಲ್ಲಿದ್ದು, ಆಗಸ್ಟ್‌ನಲ್ಲಿ ಚಿತ್ರವು ತೆರೆಗೆ ಬರುವ ನಿರೀಕ್ಷೆಯಿದೆ. ರಂಜಾನ್ ಹಬ್ಬದ ಸೀಸನ್‌ನಿಂದ ಚಿತ್ರ ತಡವಾಯಿತು ಮತ್ತು ನಂತರ ನಾನು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾದೆ. ಪಾತ್ರದ ಬಗ್ಗೆ ಚರ್ಚಿಸಲು ಮತ್ತು ಪಾತ್ರಕ್ಕಾಗಿ ತಯಾರಿ ನಡೆಸಲು ನಾನು ಶೀಘ್ರದಲ್ಲೇ ನಿರ್ದೇಶಕರೊಂದಿಗೆ ಚರ್ಚಿಸುತ್ತೇನೆ ಎಂದು ಝೈದ್ ಖಾನ್ ಹೇಳಿದ್ದಾರೆ.
ಯುವರಾಜ್‌ಕುಮಾರ್‌ಗಾಗಿ ಅವರು ತಯಾರಿಸಿದ್ದ ದೃಶ್ಯಗಳನ್ನು ನಾನು ನೋಡಿದ್ದೇನೆ ಅವು ಅತ್ಯುತ್ತಮವಾಗಿದ್ದು ನನಗೆ ಹಿಡಿಸಿವೆ. ನಾವು ಈಗ ಚರ್ಚೆಯ ಆರಂಭಿಕ ಹಂತದಲ್ಲಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ಝೈದ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ: ನಾನು ಕನ್ನಡಿಗ, ಸ್ಯಾಂಡಲ್‌ವುಡ್ ಮೂಲಕ ಪಾದಾರ್ಪಣೆ ಮಾಡಿದ್ದು ಸಂತೋಷವಾಗಿದೆ: ಝೈದ್ ಖಾನ್
ಆ್ಯಕ್ಷನ್ ಮತ್ತು ನೃತ್ಯದ ದೃಶ್ಯಗಳಲ್ಲಿ ನಾನು ಝೈದ್ ಖಾನ್ ಅವರನ್ನು ನೋಡಿದ ಪ್ರಕಾರ, ಅವರಿಗೆ ಆಕ್ಷನ್ ಹೀರೋ ಆಗುವ ಸಾಮರ್ಥ್ಯವಿದೆ ಎಂದು ನಾನು ಗುರುತಿಸಿದ್ದೇನೆ. ಅವರ ಅಭಿನಯದ ಈ ಅಂಶವನ್ನು ಹೊರತರುವ ಸವಾಲಿನ ವಿಷಯವನ್ನು ನಾನು ಅವರಿಂದ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ನಿರ್ದೇಶಕ ಪುನೀತ್ ಹೇಳಿದ್ದಾರೆ. ಝೈದ್ ಖಾನ್ ಅವರನ್ನು ಆಕ್ಷನ್ ಹೀರೋ ಆಗಿ ಚಿತ್ರಿಸುವ ಬಗ್ಗೆ ಪುನೀತ್ ಅತ್ಯಂತ ಉತ್ಸಾಹ ತೋರಿದ್ದಾರೆ.