ಗಾಯದಿಂದ ಚೇತರಿಸಿಕೊಂಡ ನಟ ಶ್ರೀ ಮುರಳಿ, ಬಘೀರ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ

ಬಘೀರ ಚಿತ್ರದ ಸೆಟ್‌ನಲ್ಲಿ ಗಾಯಗೊಂಡು ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶ್ರೀ ಮುರಳಿ ಅವರು ಚೇತರಿಸಿಕೊಂಡಿದ್ದು, ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ.
ಬಘೀರ ಚಿತ್ರದ ಪೋಸ್ಟರ್ - ಶ್ರೀಮುರಳಿ
ಬಘೀರ ಚಿತ್ರದ ಪೋಸ್ಟರ್ - ಶ್ರೀಮುರಳಿ

ಬಘೀರ ಚಿತ್ರದ ಸೆಟ್‌ನಲ್ಲಿ ಗಾಯಗೊಂಡು ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶ್ರೀ ಮುರಳಿ ಅವರು ಚೇತರಿಸಿಕೊಂಡಿದ್ದು, ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ.

<strong>ಪ್ರಕಾಶ್ ರಾಜ್</strong>
ಪ್ರಕಾಶ್ ರಾಜ್

ಮೂರು ತಿಂಗಳ ವಿರಾಮದ ನಂತರ ನಟ ಈಗ ಸೆಟ್‌ಗೆ ಮರಳಿದ್ದಾರೆ ಮತ್ತು ಶ್ರೀ ಮುರಳಿ ಅವರು ಹಿರಿಯ ನಟ ಪ್ರಕಾಶ್ ರಾಜ್ ಅವರೊಂದಿಗೆ ಕೆಲವು ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂದು ಚಿತ್ರತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಬಘೀರ ಮುಂಬರುವ ಮತ್ತು ಬಹು ನಿರೀಕ್ಷಿತ ಬಹುಭಾಷಾ ಚಿತ್ರವಾಗಿದ್ದು, ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಯಶ್ ಮತ್ತು ರಮ್ಯಾ ಅಭಿನಯದ ಲಕ್ಕಿ ಚಿತ್ರ ನಿರ್ದೇಶಿಸಿದ್ದ ಡಾ. ಸೂರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಎಜೆ ಶೆಟ್ಟಿ ಅವರ ಛಾಯಾಗ್ರಹಣವಿದೆ.

ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕಾಗಿ ಶ್ರೀಮುರಳಿ ಅವರು ಖಾಕಿ ಧರಿಸಿದ್ದಾರೆ. ತಾರಾಗಣದಲ್ಲಿ ರಂಗಾಯಣ ರಘು, ಅಚ್ಯುತ್ ಕುಮಾರ್ ಮತ್ತು ಪುನೀತ್ ರುದ್ರನಾಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಬಘೀರ ತಂಡವು ಸೆಟ್‌ಗೆ ಮರಳುವುದರೊಂದಿಗೆ, ಮುಂದಿನ ಕೆಲವು ದಿನಗಳಲ್ಲಿ ಮೈಸೂರಿನಲ್ಲಿ ತಮ್ಮ ಮುಂದಿನ ಭಾಗಗಳ ಚಿತ್ರೀಕರಣವನ್ನು ಪುನರಾರಂಭಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com