
ಅಜನೀಶ್ ಲೋಕನಾಥ್
ನಿರ್ದೇಶಕ ಉಪೇಂದ್ರ ಅವರ ಮುಂಬರುವ UI ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ. ವಿಕ್ರಾಂತ್ ರೋಣ ಮತ್ತು ಕಾಂತಾರ ದಂತ ಸಿನಿಮಾಗಳಿಗೆ ಸಂಗೀತ ನೀಡಿದ್ದರು.
ಈ ಎರಡು ಸಿನಿಮಾ ಹಾಡುಗಳು ಜನ ಮನ ಗೆದ್ದು ಬ್ಲಾಕ್ ಬಸ್ಟರ್ ಆಗಿದ್ದವು. ಮೊದಲ ಬಾರಿಗೆ ಅಜನೀಶ್ ಅವರು ಉಪೇಂದ್ರ ಅವರ ಯು ಐ ನಿರ್ದೇಶನಕ್ಕಾಗಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರುವ ನಿರೀಕ್ಷೆಯಿದೆ.
ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ಮತ್ತು ಕೆಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ನಿರ್ಮಿಸಿದ UI ನಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.