'ಸಪ್ತ ಸಾಗರದಾಚೆ ಎಲ್ಲೋ' ಪ್ರೇಮಕಥೆ ಎರಡು ಚಿತ್ರಗಳಾಗಿ ವಿಭಜನೆ, ಒಂದು ಹೊಸ ಪರಿಕಲ್ಪನೆ: ನಟ ರಕ್ಷಿತ್ ಶೆಟ್ಟಿ

'ಸಪ್ತ ಸಾಗರದಾಚೆ ಎಲ್ಲೋ ಬಿ ಸೈಡ್ ಬಿಡುಗಡೆ ಹಿನ್ನೆಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ಈ ಸಿನಿಮಾದ ನಿರ್ಮಾಣ, ಅದರ ಮುಕ್ತಾಯ ಕುರಿತು ಮಾತನಾಡಿದರು. ಪ್ರೀಮಿಯರ್ ಶೋನಲ್ಲಿ ಸಿಕ್ಕ ಪ್ರತಿಕ್ರಿಯೆ ಚಿತ್ರದ ಯಶಸ್ಸು ಕುರಿತು ತಿಳಿಯಲು ನೆರವಾಯಿತು ಎಂದರು. 
ಸಪ್ತ ಸಾಗರದಾಚೆ ಎಲ್ಲೋ ಬಿ ಸೈಡ್
ಸಪ್ತ ಸಾಗರದಾಚೆ ಎಲ್ಲೋ ಬಿ ಸೈಡ್

ಸೆಪ್ಟೆಂಬರ್‌ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಬಿಡುಗಡೆಯ ಸಮಯದಲ್ಲಿ ನಿರ್ದೇಶಕ ಹೇಮಂತ್ ರಾವ್ ಅವರಂತೆಯೇ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮತ್ತು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಮುಕ್ತರಾಗಿದ್ದಾಗಿ ಹೇಳುವ ನಟ ರಕ್ಷಿತ್ ಶೆಟ್ಟ,ಯಾವುದೇ ರೀತಿಯ ರಿಸಲ್ಟ್ ಗೆ ಸಿದ್ಧರಾಗುವಂತೆ ತನ್ನ ನಿರ್ದೇಶಕರಿಗೆ ಸಲಹೆ ನೀಡಿದ್ದರಂತೆ. 'ಸಪ್ತ ಸಾಗರದಾಚೆ ಎಲ್ಲೋ' ದಂತಹ ಚಿತ್ರಗಳನ್ನು ಪ್ರತಿಯೊಬ್ಬ ಪ್ರೇಕ್ಷಕರನ್ನು ಆಕರ್ಷಿಸುವುದಿಲ್ಲ, ಅಂತಹ ಕಥೆಗಳನ್ನು ಬೆಳ್ಳಿತೆರೆಯಲ್ಲಿ ನೋಡುವುದು ಅಪರೂಪ ಅಂದುಕೊಂಡಿದ್ದರಂತೆ.

'ಸಪ್ತ ಸಾಗರದಾಚೆ ಎಲ್ಲೋ ಬಿ ಸೈಡ್ ಬಿಡುಗಡೆ ಹಿನ್ನೆಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ಈ ಸಿನಿಮಾದ ನಿರ್ಮಾಣ, ಅದರ ಮುಕ್ತಾಯ ಕುರಿತು ಮಾತನಾಡಿದರು. ಪ್ರೀಮಿಯರ್ ಶೋನಲ್ಲಿ ಸಿಕ್ಕ ಪ್ರತಿಕ್ರಿಯೆ ಚಿತ್ರದ ಯಶಸ್ಸು ಕುರಿತು ತಿಳಿಯಲು ನೆರವಾಯಿತು ಎಂದರು. 

ಸಾಮಾನ್ಯವಾಗಿ ಒಟ್ಟಾರೇ ಪ್ರತಿಕ್ರಿಯೆ, ವಿಷಯ ಹೇಗಿದೆ, ವೀಕ್ಷಕರೊಂದಿಗೆ ಹೇಗೆ ಪ್ರಸ್ತುತಪಡಿಸಲಾಗಿದೆ ಎಂಬುದನ್ನು ಅವಲಂಬಿಸಿರುತ್ತೇನೆ. ಚಿತ್ರ ಯಾವ ರೀತಿಯಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂಬುದರ ಬಗ್ಗೆ ಹೇಮಂತ್ ಅವರೊಂದಿಗೆ ಚರ್ಚಿಸಿದೆ. ಎಲ್ಲಾ ಜನರು ಬಂದು ಸಿನಿಮಾ ನೋಡುತ್ತಾರೆ ಅಂದುಕೊಂಡಿರಲಿಲ್ಲ. ಎ ಸೈಡ್ ನೇರಾನೇರ ಎಂದು ನಿರ್ದೇಶಕರು ನಿರೂಪಿಸಿದ್ದರು. ಬಿಸೈಡ್ ಮನು ಮತ್ತು ಪ್ರಿಯಾ ಜೊತೆಗಿನ ಸಂಪೂರ್ಣ ರೋಮ್ಯಾಂಟಿಕ್ ಕಥೆಯಾಗಿದೆ. ಮೊದಲ ಭಾಗದಲ್ಲಿ ಕಥೆ ಮುಕ್ತಾಯಗೊಳಿಸಲ್ಲ. ಬಿಸೈಡ್ ನಲ್ಲಿ ಎಲ್ಲವೂ ಮುಕ್ತಾಯಗೊಳ್ಳಲಿದೆ ಎಂದರು

ನಿರ್ಮಾಪಕನಾಗಿ ಸೈಡ್ ಎ ಮಾತ್ರವಲ್ಲದೆ ಸೈಡ್ ಬಿ ಚಿತ್ರಕ್ಕೂ ಹೂಡಿಕೆ ಮಾಡಿದ್ದೇನೆ. ಚಿತ್ರವು ಮೊದಲಿಗೆ ನಿಧಾನವಾಗಿದ್ದರೂ ವೀಕ್ಷಕರು ಬಿ ಸೈಡನ್ ವೀಕ್ಷಿಸಿದ ನಂತರ ದೃಷ್ಟಿಕೋನಗಳು ಬದಲಾಗಬಹುದು. ಸೈಡ್ ಎ ನಿಜ ಜೀವನದಲ್ಲಿ ಇರುವಂತಹ ನಿಜವಾದ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ, ಆದರೆ ಸೈಡ್ ಬಿ ಕ್ರಮೇಣ ನಮ್ಮನ್ನು ಸಿನಿಮಾ ಜಗತ್ತಿಗೆ ಪರಿಚಯಿಸುತ್ತದೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com