ಬಿಗ್ ಬಾಸ್ ಕನ್ನಡ 10: ಇಶಾನಿ, ಭಾಗ್ಯಶ್ರೀ ಔಟ್, ಬ್ರಹ್ಮಾಂಡ ಗುರೂಜಿ ಎಂಟ್ರಿ!
ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ ''ಬಿಗ್ ಬಾಸ್ ಮನೆ ಸೀಸನ್ 10''ರ ವಾರಾಂತ್ಯದ ಎಲಿಮಿನೇಷನ್ ನಲ್ಲಿ ಈ ವಾರ ಇಶಾನಿ ಹಾಗೂ ಭಾಗ್ಯಶ್ರೀ ಮನೆಯಿಂದ ಹೊರಗಡೆ ಬಂದಿದ್ದಾರೆ.
Published: 20th November 2023 11:02 AM | Last Updated: 20th November 2023 02:23 PM | A+A A-

ಭಾಗ್ಯಶ್ರೀ, ಇಶಾನಿ, ಬ್ರಹ್ಮಾಂಡ ಗುರೂಜಿ
ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ ''ಬಿಗ್ ಬಾಸ್ ಮನೆ ಸೀಸನ್ 10''ರ ವಾರಾಂತ್ಯದ ಎಲಿಮಿನೇಷನ್ ನಲ್ಲಿ ಈ ವಾರ ಇಶಾನಿ ಹಾಗೂ ಭಾಗ್ಯಶ್ರೀ ಮನೆಯಿಂದ ಹೊರಗಡೆ ಬಂದಿದ್ದಾರೆ.
ಶನಿವಾರ ಇಶಾನಿ ಎಲಿಮಿನೇಷನ್ ಆಗಿದ್ದರು. ಭಾನುವಾರ ಭಾಗ್ಯಶ್ರೀ ಎಲಿಮಿನೇಷನ್ ಆಗಿದ್ದು, ಇದೀಗ ಇಬ್ಬರು ದೊಡ್ಮನೆಯಿಂದ ಹೊರ ಬಂದಿದ್ದಾರೆ. ಅಚ್ಚರಿ ಎಂಬಂತೆ ಬ್ರಹ್ಮಾಂಡ ಗುರೂಜಿ ಮನೆಯೊಳಗೆ ಎಂಟ್ರಿ ನೀಡಿದ್ದಾರೆ. ಇದು ಅನೇಕ ಕುತೂಹಲಗಳಿಗೆ ಕಾರಣವಾಗಿದೆ.
ದಸರಾ ಹಬ್ಬವಿದ್ದ ಕಾರಣ ಭಾಗ್ಯಶ್ರೀ ಅವರು ಅಂದು ಜಸ್ಟ್ ಮಿಸ್ ಆಗಿದ್ದರು. ಎಲಿಮಿನೇಷನ್ ಬಿಸಿ ತಟ್ಟಿದ ಮೇಲೆ ಭಾಗ್ಯ ಅವರು ಎಚ್ಚೆತ್ತುಕೊಂಡಿದ್ದರು. ಅದಾದ ಬಳಿಕ ಮನೆಯಲ್ಲಿ ಸ್ವಲ್ಪ ಆಕ್ಟಿವ್ ಆಗಿ ಭಾಗ್ಯ ಆಟ ಆಡಿದ್ದರು. ಇದಕ್ಕೂ ಮುನ್ನಾ ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ, ರಕ್ಷಕ್, ಇಶಾನಿ ಮನೆಯಿಂದ ಎಲಿಮಿನೇಟ್ ಆಗಿದ್ರು.
ಇದನ್ನೂ ಓದಿ: ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಶಾಕ್: ಮನೆಯಿಂದ ಮೊದಲು ಇಶಾನಿ ಔಟ್, ಮತ್ತೊಂದು ವಿಕೆಟ್ ಯಾರದ್ದು?
ಇಶಾನಿ, ಭಾಗ್ಯಶ್ರೀ ಔಟ್ ಆದ ಬಳಿಕ ಬ್ರಹ್ಮಾಂಡ ಗುರೂಜಿ ಬಿಗ್ ಬಾಗ್ ಮನೆ ಪ್ರವೇಶಿಸಿದ್ದಾರೆ. ಹೌದು. ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಗುರೂಜಿ ಮನೆಯೊಳಗೆ ಆಗಮಿಸುವ ದೃಶ್ಯವಿದೆ. ಇದು ಸಹಜವಾಗಿ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಅವರದು ವೈಲ್ಡ್ ಕಾರ್ಡ್ ಅಥವಾ ಅತಿಥಿಯಾಗಿ ಬಂದಿದ್ದಾರೆಯೇ ಎಂಬುದು ಗೊತ್ತಿಲ್ಲ.
ಈ ಹಿಂದೆ ಪ್ರಥಮ್, ತಾರಾ ಅನುರಾಧಾ, ಕಿರುತೆರೆ ನಟಿ ಸುಷ್ಮಾ ಕೂಡಾ ಮನೆಗೆ ಬಂದು ಹೋಗಿದ್ದಾರೆ. ಆದರೆ, ಬ್ರಹ್ಮಾಂಡ ಗುರೂಜಿ ಪ್ರವೇಶ ಏನು ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.