
ಬೆಂಗಳೂರು: ಸತತ ನಾಮಿನೇಷನ್ನಿಂದ ಪಾರಾಗಿದ್ದ ಇಶಾನಿ 6ನೇ ವಾರದಲ್ಲಿ ಉಳಿದುಕೊಳ್ಳುವಲ್ಲಿ ವಿಫಲವಾಗಿದ್ದು, ಶಾಕಿಂಗ್ ಡಬಲ್ ಎಲಿಮಿನೇಷನ್ನಲ್ಲಿ ಇದೀಗ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿಯಾಗಿದ್ದಾರೆ.
ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ನಡೆದ ಒಂದಷ್ಟು ಹೈಡ್ರಾಮಾಗಳಿಂದ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ವರ್ತೂರ್ ಸಂತೋಷ್ ಎಲಿಮಿನೇಟ್ ಆಗದಿದ್ದರೂ, ನಾನು ಹೊರಹೋಗಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಎಲಿಮಿನೇಷನ್ ಆಗಿರಲಿಲ್ಲ. ಇದೀಗ ಡಬಲ್ ಶಾಕ್ ಎಂಬಂತೆ ಇಬ್ಬರನ್ನು ಎಲಿಮಿನೇಷನ್ ಮಾಡಲಾಗುತ್ತಿದೆ. ಆ ಪೈಕಿ ಶನಿವಾರ ಇಶಾನಿ ಮನೆಯಿಂದ ಹೊರಬಂದಿದ್ದಾರೆ.
ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಮನೆಯ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿದ್ದು, ಎಂದಿನಂತೆ ತಮ್ಮ ಖಡಕ್ ಶೈಲಿಯಲ್ಲೇ ಸುದೀಪ್ ಅರ್ಥ ಮಾಡಿಸಿದರು.
ಭಾಗ್ಯಶ್ರೀ ವಿರುದ್ಧ ಸ್ನೇಹಿತ್ ನೀಡಿದ್ದ ಹೇಳಿಕೆಯನ್ನು ಎಲ್ಲರ ಮುಂದೆ ಹೇಳುವಂತೆ ಹೇಳಿ, ಬುದ್ದಿ ಮಾತುಗಳನ್ನು ತಿಳಿ ಹೇಳಿದರು. ಬಳಿಕ ನಗುವಿಗಿಂತಲೂ ಹೆಚ್ಚು ಬಿಸಿ ಬಿಸಿ ಚರ್ಚೆಯನ್ನು ಮುನ್ನೆಲೆಗೆ ತಂದ ಸುದೀಪ್, ತಕ್ಷಣವೇ ನಾಮಿನೇಷನ್ ಸಾಲಿಗೆ ಬಂದು ಎಲಿಮಿನೇಟ್ ಆದವರ ಹೆಸರನ್ನು ಘೋಷಣೆ ಮಾಡಿಯೇ ಬಿಟ್ಟರು. ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು.
ಈ ವೇಳೆ ಮೆಲ್ಲನೇ ಎದ್ದು ನಿಂತುಕೊಂಡ ಇಶಾನಿಗೆ “ನಿಜ. ನಿಮ್ಮ ಪಯಣ ಬಿಗ್‌ಬಾಸ್ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್” ಎಂದು ಸುದೀಪ್ ಹೇಳಿದರು.
ಇಂದು ನಡೆಯುವ ಎಪಿಸೋಡ್‌ನಲ್ಲಿ ಮತ್ತೊಬ್ಬರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ಇಂದಿನ ಸಂಚಿಕೆಯಲ್ಲಿ ಕಿಚ್ಚನ ಸಂವಾದ ನಡೆಯಲಿದೆ. ಇದೀಗ ಹೊರಬರುವ ಮತ್ತೊಬ್ಬ ಸ್ಪರ್ಧಿ ಯಾರು ಎಂಬುದನ್ನು ತಿಳಿಯಲು ವೀಕ್ಷಕರು ಕುತೂಹಲದಿಂದ ಕಾಯತೊಡಗಿದ್ದಾರೆ.
Advertisement