ವಿಜಯ್-ತ್ರಿಶಾ ಅಭಿನಯದ 'ಲಿಯೋ' ಒಟಿಟಿ ಬಿಡುಗಡೆ ದಿನಾಂಕ ಬದಲು; ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್!
ನಟ ವಿಜಯ್ ಅಭಿನಯದ ತಮಿಳು ಆ್ಯಕ್ಷನ್ ಥ್ರಿಲ್ಲರ್ 'ಲಿಯೋ' ಸಿನಿಮಾ ನವೆಂಬರ್ 24ರಂದು ಭಾರತದಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದ್ದು, ನಂತರ ನವೆಂಬರ್ 28ರಿಂದ ವಿದೇಶದಲ್ಲಿರುವ ನೆಟ್‌ಫ್ಲಿಕ್ಸ್ ಚಂದಾದಾರರಿಗೆ ಲಭ್ಯವಿರಲಿದೆ.
Published: 21st November 2023 11:15 AM | Last Updated: 21st November 2023 11:15 AM | A+A A-

ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ಸ್ಟಿಲ್
ನವದೆಹಲಿ: ನಟ ವಿಜಯ್ ಅಭಿನಯದ ತಮಿಳು ಆ್ಯಕ್ಷನ್ ಥ್ರಿಲ್ಲರ್ 'ಲಿಯೋ' ಸಿನಿಮಾ ನವೆಂಬರ್ 24ರಂದು ಭಾರತದಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದ್ದು, ನಂತರ ನವೆಂಬರ್ 28ರಿಂದ ವಿದೇಶದಲ್ಲಿರುವ ನೆಟ್‌ಫ್ಲಿಕ್ಸ್ ಚಂದಾದಾರರಿಗೆ ಲಭ್ಯವಿರಲಿದೆ.
ನೆಟ್‌ಫ್ಲಿಕ್ಸ್‌ನ ಸೌತ್ ಇಂಡಿಯಾ ಆರ್ಮ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಘೋಷಣೆ ಮಾಡಿದೆ.
'ಕಾಯುವಿಕೆ ಕೊನೆಗೂ ಮುಗಿಯಿತು!! ನಾವು ನಿಮಗಾಗಿ ಕೆಲವು ಉತ್ತಮ ಸಿಹಿ ಸುದ್ದಿಯನ್ನು ತಂದಿದ್ದೇವೆ. ನಾವ್ ರೆಡಿ! ನೀವು? ಲಿಯೋ ಸಿನಿಮಾ ಭಾರತದಲ್ಲಿ ನವೆಂಬರ್ 24 ರಂದು ಮತ್ತು ಜಾಗತಿಕವಾಗಿ ನವೆಂಬರ್ 28 ರಂದು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ನೆಟ್‌ಫ್ಲಿಕ್ಸ್‌ಗೆ ಬರಲಿದೆ' ಎಂದು ಸೋಮವಾರ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಅಕ್ಟೋಬರ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಇದನ್ನೂ ಓದಿ: ದಳಪತಿ ವಿಜಯ್ ನಟನೆಯ 'ಲಿಯೋ' ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್: ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್
ಈ ಚಿತ್ರವು ಸಿನಿ ಪ್ರೇಮಿಗಳಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಆದರೆ, ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಸಂಗ್ರಹದಲ್ಲಿ 500 ಕೋಟಿ ರೂ. ಗಳಿಸುವ ಮೂಲಕ 2023ರ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾವಾಗಿ ಹೊರಹೊಮ್ಮಿತು.
ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್, ಮಿಶ್ಕಿನ್ ಮತ್ತು ಗೌತಮ್ ವಾಸುದೇವ್ ಮೆನನ್ ಸಹ ನಟಿಸಿದ್ದಾರೆ.