ವಿಜಯ್ ರಾಘವೇಂದ್ರ, ಸೋನು ಗೌಡ ನಟನೆಯ ಮರೀಚಿ ಬಿಡುಗಡೆಗೆ ದಿನಾಂಕ ಫಿಕ್ಸ್

ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಸೋನು ಗೌಡ ನಟನೆಯ ಮರೀಚಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಿದ್ಧ್ರುವ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದು, ಡಿಸೆಂಬರ್ 8ರಂದು ಬಹುನಿರೀಕ್ಷಿತ ಕೈವ ಸೇರಿದಂತೆ ಇತರೆ ಚಿತ್ರಗಳ ಜೊತೆಗೆ ಮರೀಚಿ ಬಿಡುಗಡೆಯಾಗಲಿದೆ. 
ಮರೀಚಿ ಚಿತ್ರದ ಸ್ಟಿಲ್
ಮರೀಚಿ ಚಿತ್ರದ ಸ್ಟಿಲ್

ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಸೋನು ಗೌಡ ನಟನೆಯ ಮರೀಚಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಿದ್ಧ್ರುವ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದು, ಡಿಸೆಂಬರ್ 8ರಂದು ಬಹುನಿರೀಕ್ಷಿತ ಕೈವ ಸೇರಿದಂತೆ ಇತರೆ ಚಿತ್ರಗಳ ಜೊತೆಗೆ ಮರೀಚಿ ಬಿಡುಗಡೆಯಾಗಲಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವಿರುವ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಸಿಧ್ರುವ್ ಮಾತನಾಡಿ, ತಾಂತ್ರಿಕ ಕೌಶಲ್ಯಗಳ ಪ್ರಾಮುಖ್ಯತೆ ಮತ್ತು ನಿರ್ದೇಶಕರ ದೃಷ್ಟಿಗೆ ಜೀವ ತುಂಬಲು ಕಲಾತ್ಮಕ ತಂಡದ ಬೆಂಬಲ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಒತ್ತಿಹೇಳಿದರು. ಅನಿರೀಕ್ಷಿತ ಸಂದರ್ಭಗಳ ಹೊರತಾಗಿಯೂ ಚಿತ್ರಕ್ಕೆ ಸಿಗುತ್ತಿರುವ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

<strong>ಮರೀಚಿ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ</strong>
ಮರೀಚಿ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ

'ಮರೀಚಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಆಗಿರುವ ಆಕರ್ಷಕ ಪ್ರೇಮಕಥೆಯನ್ನು ಹೊಂದಿದೆ. ಇದು ಕೊಲೆ ಪ್ರಕರಣವನ್ನು ಭೇದಿಸುವ ಕುರಿತು ಹೇಳುತ್ತದೆ. ಕೊಲೆ ನಂತರ ಸುಳಿವುಗಳನ್ನು ಬಿಟ್ಟು ಪೊಲೀಸರಿಗೆ ಸವಾಲೆಸೆಯುವ ಹಂತಕನ ಪತ್ತೆ, ಕೊಲೆಗಾರ ಹೇಗೆ ಸಿಕ್ಕಿಬೀಳುತ್ತಾನೆ ಮತ್ತು ವೈದ್ಯಕೀಯ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ದುರುಪಯೋಗದ ಜೊತೆಗೆ ಪ್ರಕರಣವನ್ನು ಹೇಗೆ ಪರಿಹರಿಸಲಾಗುತ್ತದೆ ಎಂಬುದರ ಸುತ್ತ ಚಿತ್ರ ಸುತ್ತುತ್ತದೆ' ಎಂದರು ಸಿದ್ಧ್ರುವ್. 

ಈ ಚಿತ್ರದಲ್ಲಿ ನಾವು ತಂದಿರುವ ಪುರಾವೆ ತಂತ್ರಗಳು ಈವರೆಗೂ ಯಾವುದೇ ಸಿನಿಮಾಗಳಲ್ಲಿ ಅನ್ವೇಷಿಸದ ಸಂಗತಿಯಾಗಿದೆ ಎಂದು ನಿರ್ದೇಶಕರು ಉಲ್ಲೇಖಿಸಿದ್ದಾರೆ.

ಎಸ್‌ಎಸ್‌ಆರ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅಭಿ ದಾಸ್, ಸ್ಪಂದನಾ ಸೋಮಣ್ಣ, ಆರ್ಯನ್, ಶ್ರುತಿ ಪಾಟೀಲ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಅರುಣ್ ಬಾಲರಾಜ್ ಕೂಡ ಇದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಮನೋಹರ್ ಜೋಶಿ ನಿರ್ವಹಿಸುತ್ತಿದ್ದು, ಜ್ಯೋತಿ ಸಂದೀಪ್ ಸಂಗೀತ ನಿರ್ದೇಶನವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com