ಸಪ್ತ ಸಾಗರದಾಚೆ ಎಲ್ಲೋ-ಸೈಡ್ ಎ ಚಿತ್ರಕ್ಕೆ ಒಟಿಟಿಯಲ್ಲಿ ಭಾರಿ ಪ್ರತಿಕ್ರಿಯೆ, ಸಂತಸದಲ್ಲಿ ಚಿತ್ರತಂಡ
ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೈಡ್ ಎ ಮತ್ತು ಸೈಡ್ ಬಿ ಆಗಿ ತಯಾರಾಗಿದೆ. ಈಮಧ್ಯೆ, ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಸೆಪ್ಟೆಂಬರ್ 29ರಂದು ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಿದ್ದು, ಭಾರಿ ಹಿಟ್ ಆಗಿದೆ.
Published: 02nd October 2023 11:33 AM | Last Updated: 02nd October 2023 11:34 AM | A+A A-

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸ್ಟಿಲ್
ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೈಡ್ ಎ ಮತ್ತು ಸೈಡ್ ಬಿ ಆಗಿ ತಯಾರಾಗಿದ್ದು, ಸೆಪ್ಟೆಂಬರ್ 1 ರಂದು ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು. ಇದನ್ನು ತೆಲುಗಿನಲ್ಲಿ ಸಪ್ತ ಸಾಗರಾಲು ದಾಟಿ ಎಂಬ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ.
ಚಿತ್ರತಂಡ ಸೈಡ್ ಬಿ ಬಿಡುಗಡೆಯನ್ನು ಮುಂದೂಡಿದ್ದು, ಅಕ್ಟೋಬರ್ 20ರ ಬದಲಾಗಿದೆ ಅಕ್ಟೋಬರ್ 27ಕ್ಕೆ ಬಿಡುಗಡೆ ಮಾಡಲಿದೆ.
ದಸರಾ ಸಂದರ್ಭದಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗುತ್ತಿರುವ ಕಾರಣ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ನಿರ್ದೇಶಕ ಎಂದು ಹೇಮಂತ್ ಹಂಚಿಕೊಂಡಿದ್ದಾರೆ. ಈಮಧ್ಯೆ, ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಸೆಪ್ಟೆಂಬರ್ 29ರಂದು ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಿದ್ದು, ಭಾರಿ ಹಿಟ್ ಆಗಿದೆ.
ಚಿತ್ರತಂಡದ ಪ್ರಕಾರ, ಬಹು ಭಾಷೆಗಳಲ್ಲಿ ಬಿಡುಗಡೆಯಾದ ಎಸ್ಎಸ್ಇ- ಸೈಡ್ ಎ ಕಳೆದ ಮೂರು ದಿನಗಳಿಂದ ಹೆಚ್ಚು ಹುಡುಕಲ್ಪಟ್ಟ ಚಿತ್ರವಾಗಿದೆ ಮತ್ತು ಒಟಿಟಿಯಲ್ಲಿ ಟಾಪ್ 5ರಲ್ಲಿ ಟ್ರೆಂಡಿಂಗ್ ಆಗಿದೆ. ವಿಶೇಷವಾಗಿ ಹಿಂದಿ ಆವೃತ್ತಿ ಟ್ರೆಂಡಿಂಗ್ ಆಗಿದೆ.
ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ' ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ, ರಿಲೀಸ್ ಡೇಟ್ ಮುಂದಕ್ಕೆ!
ಈಮಧ್ಯೆ, ಸಿನಿಮಾ ವೀಕ್ಷಿಸಿದ ವಿವಿಧ ಭಾಷೆಗಳ ನಿರ್ದೇಶಕರು, ಸಾಮಾಜಿಕ ವೇದಿಕೆಗಳಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿರ್ದೇಶಕರು ಮತ್ತು ನಟರಿಗೆ ಕರೆ ಮಾಡಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.
ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ತಯಾರಾದ ಚಿತ್ರದಲ್ಲಿ ರುಕ್ಮಿಣಿ ವಸಂತ್, ಚೈತ್ರ ಜೆ. ಆಚಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ರಮೇಶ್ ಇಂದಿರಾ, ಗೋಪಾಲ್ ಕೃಷ್ಣ ದೇಶಪಾಂಡೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತವಿರುವ ಈ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ.