ಶಿವರಾಜ್ ಕುಮಾರ್ ಅವರ ಕ್ಷಮೆ ನಾನು ಸ್ವೀಕರಿಸಲ್ಲ: ಮೌನ ಮುರಿದ ನಟ ಸಿದ್ದಾರ್ಥ್

ತಮಿಳು ನಟ ಸಿದ್ದಾರ್ಥ್ ಅವರು ಬೆಂಗಳೂರಿನಲ್ಲಿ ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಕನ್ನಡಪರ ಸಂಘಟನೆಗಳು ಅಡ್ಡಿ ಪಡಿಸಿದ ಬಳಿಕ, ನಟ ಶಿವರಾಜ್‌ ಕುಮಾರ್‌ ಅವರು ಕ್ಷಮೆ ಕೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದಾರ್ಥ್‌, ಶಿವರಾಜ್‌ ಕುಮಾರ್‌ ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಸಿದ್ದಾರ್ಥ್
ಸಿದ್ದಾರ್ಥ್
Updated on

ತಮಿಳು ನಟ ಸಿದ್ದಾರ್ಥ್ ಅವರು ಬೆಂಗಳೂರಿನಲ್ಲಿ ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಕನ್ನಡಪರ ಸಂಘಟನೆಗಳು ಅಡ್ಡಿ ಪಡಿಸಿದ ಬಳಿಕ, ನಟ ಶಿವರಾಜ್‌ ಕುಮಾರ್‌ ಅವರು ಕ್ಷಮೆ ಕೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದಾರ್ಥ್‌, ಶಿವರಾಜ್‌ ಕುಮಾರ್‌ ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

ನಮ್ಮ ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದೆವು. ಈ ವೇಳೆ ಕೆಲವರು ಅಡ್ಡಿ ಪಡಿಸಿದರು. ಇದಾದ ಬಳಿಕ ಕನ್ನಡ ಸಿನಿಮಾ ಉದ್ಯಮದ ಪರವಾಗಿ ಹಿರಿಯ ನಟ ಶಿವರಾಜ್‌ ಕುಮಾರ್ ಅವರು ಕ್ಷಮೆ ಕೋರಿದ್ದಾರೆ. ಆದರೆ, ಇದನ್ನು ನಾನು ಸ್ವೀಕರಿಸಲಾಗುವುದಿಲ್ಲ. ಈ ಘಟನೆಗೂ ನಟ ಶಿವರಾಜ್​ಕುಮಾರ್​ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ, ತಮ್ಮ ಉದಾತ್ತ ಹೃದಯದಿಂದಾಗಿ ಅವರು ಈ ರೀತಿ ನಡೆದುಕೊಂಡಿದ್ದಾರೆ ಎಂದು ಸಿದ್ದಾರ್ಥ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ತಮ್ಮ ಸುದ್ದಿಗೋಷ್ಠಿಯಲ್ಲಿ ಮಧ್ಯಪ್ರವೇಶಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ತಮ್ಮ ಸಿನಿಮಾ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿದ್ದ ಘಟನೆಗೆ ಸಂಬಂಧಿಸಿದಂತೆ ಇದೇ ಮೊದಲಿಗೆ ಪ್ರತಿಕ್ರಿಯಿಸಿರುವ ನಟ ಸಿದ್ಧಾರ್ಥ್ ‘ಘಟನೆಯಿಂದ ನನಗೆ ನಿರಾಸೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಸಿದ್ದಾರ್ಥ್ ಅವರಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದರು. ಕನ್ನಡಿಗರು ಎಲ್ಲರನ್ನೂ ಸ್ವಾಗತಿಸುತ್ತೇವೆ. ಪ್ರತಿಯೊಬ್ಬರಿಗೂ ಸಮಸ್ಯೆ ಇದೆ. ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಮಾಡಬೇಕು. ನಾವು ಏನೇ ಮಾಡಿದರೂ ಬೇರೊಬ್ಬರಿಗೆ ಹರ್ಟ್ ಆಗಬಾರದು. ನಟ ಸಿದ್ದಾರ್ಥ್ ಅವರಿಗೆ ನಾನು ಈ ಮೂಲಕ ಕ್ಷಮೆ ಕೇಳುತ್ತೇನೆ. ಚಿಕ್ಕು ಚಿತ್ರದ ಪ್ರಚಾರಾರ್ಥ ಅವರು ಸುದ್ದಿಗೋಷ್ಠಿ ಕರೆದಿದ್ದರು. ಅದಕ್ಕೆ ಅಡ್ಡಿಪಡಿಸಲಾಗಿತ್ತು. ಅದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ಶಿವಣ್ಣ ತಿಳಿಸಿದ್ದರು.

ಈ ಘಟನೆಯಲ್ಲಿ ಅವರ ತಪ್ಪು ಏನೂ ಇಲ್ಲ. ಅವರು‌ ನನಗಿಂತ ದೊಡ್ಡವರು, ಯಾರೋ ಮಾಡಿದ ತಪ್ಪಿಗೆ ಅವರು ಏಕೆ‌ ಕ್ಷಮೆ ಕೇಳಬೇಕು. ನನ್ನ ಸಿನಿಮಾವನ್ನು‌ ಕರ್ನಾಟಕ‌ ಜನರು ಕೂಡಾ ನೋಡುತ್ತಿದ್ದಾರೆ. ಅಲ್ಲಿ ನನ್ನ ಅಭಿಮಾನಿಗಳಿದ್ದಾರೆ‌.‌ ನಮಗೆ ಸಿನಿಮಾ‌ ಮುಖ್ಯ. ಅದನ್ನು ಕನ್ನಡಿಗರು ಮೆಚ್ಚಿದ್ದಾರೆ ಎಂದು‌ ಸಿದ್ದಾರ್ಥ್ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com