ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸ್ಟಿಲ್
ಸಿನಿಮಾ ಸುದ್ದಿ
'ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಅಧಿಕೃತ ರಿಲೀಸ್ ಡೇಟ್ ಫಿಕ್ಸ್!
ಕಳೆದ ಹಲವು ದಿನಗಳಿಂದ ಚಿತ್ರದ ಸೈಡ್ ಬಿ ರಿಲೀಸ್ ಡೇಟ್ನಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಇದೀಗ ಈ ಕುರಿತಂತೆ ಚಿತ್ರತಂಡ ಅಧಿಕೃತ ದಿನಾಂಕವನ್ನು ಘೋಷಿಸಿದೆ.
ಸಿಂಪಲ್ ಸ್ಟಾರ್, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ಗಳಿಸಿತು.
ಕಳೆದ ಹಲವು ದಿನಗಳಿಂದ ಚಿತ್ರದ ಸೈಡ್ ಬಿ ರಿಲೀಸ್ ಡೇಟ್ನಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಇದೀಗ ಈ ಕುರಿತಂತೆ ಚಿತ್ರತಂಡ ಅಧಿಕೃತ ದಿನಾಂಕವನ್ನು ಘೋಷಿಸಿದೆ.
ಪರಮಾವ್ ಪಿಕ್ಚರ್ಸ್ ನಿರ್ಮಾಣದ, ರಕ್ಷಿತ್ ಶೆಟ್ಟಿ - ರುಕ್ಮಿಣಿ ವಸಂತ್ - ಚೈತ್ರಾ ಆಚಾರ್ ಅಭಿನಯದ, ಹೇಮಂತ್ ಎಂ ರಾವ್ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ - Side B’ ಚಿತ್ರ ಇದೇ ನವೆಂಬರ್ 17ಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
Will there be a change in the course of destiny?
Sapta Sagaradaache Ello - Side B releases on 17th November in Kannada, Telugu, Tamil and Malayalam
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ