ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ಸಿನಿಮಾದಲ್ಲಿ ದುನಿಯಾ ವಿಜಯ್!

ದಕ್ಷಿಣ ಭಾರತದ ಹೆಸರಾಂತ ಬ್ಯಾನರ್ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ನಿಖಿಲ್ ಕುಮಾರ್ ಸಿನಿಮಾದಲ್ಲಿ ವಿಜಯ್ ಕುಮಾರ್ ನಟಿಸುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು.
ರಜನಿಕಾಂತ್ ಮತ್ತು ವಿಜಯ್ ಕುಮಾರ್
ರಜನಿಕಾಂತ್ ಮತ್ತು ವಿಜಯ್ ಕುಮಾರ್

ದಕ್ಷಿಣ ಭಾರತದ ಹೆಸರಾಂತ ಬ್ಯಾನರ್ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ನಿಖಿಲ್ ಕುಮಾರ್ ಸಿನಿಮಾದಲ್ಲಿ ವಿಜಯ್ ಕುಮಾರ್ ನಟಿಸುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು.

ಆದರೆ ಇತ್ತೀಚಿನ ಹೊಸ ಸುದ್ದಿ ಏನೆಂದರೆ, ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ ರಜನಿಕಾಂತ್  ಅಭಿನಯದ ಮುಂದಿನ ಸಿನಿಮಾಗೆ ತಾತ್ಕಾಲಿಕವಾಗಿ ತಲೈವರ್ 171 ಎಂಬ ಶೀರ್ಷಿಕೆ ಇಡಲಾಗಿದೆ. ಜನಪ್ರಿಯ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುವಂತೆ,ವಿಜಯ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಲವಾರು ಕಾರಣಗಳಿಗಾಗಿ ವಿಜಯ್ ನಿರಂತರವಾಗಿ ರಜನಿಕಾಂತ್ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಪರ್‌ಸ್ಟಾರ್‌ ರಜನಿ ಜೊತೆ  ಕೆಲಸ ಮಾಡುವ ಅವರ ಕನಸು ನನಸಾಗುತ್ತದೆಯೇ ಎಂದು ನೋಡಬೇಕಾಗಿದೆ.

ವಿಜಯ್ ಅವರು ವೀರ ಸಿಂಹ ರೆಡ್ಡಿ ಚಿತ್ರದಲ್ಲಿ ಬಾಲಕೃಷ್ಣ ಅವರ ಜೊತೆಯಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದರು. ಈ ಮೂಲಕ ತೆಲುಗು ಪಾದಾರ್ಪಣೆ ಮಾಡಿ, ಭಾಷೆಯ ಅಡೆತಡೆಗಳನ್ನು ಮೀರಿ ತಮ್ಮ ನಟನಾ ಸಾಮರ್ಥ್ಯ ತೋರಿಸಿದ್ದಾರೆ.

ತಲೈವರ್ 171 ಲೋಕೇಶ್ (ವಿಕ್ರಮ್, ಮಾಸ್ಟರ್ ಮತ್ತು ಲಿಯೋ ನಿರ್ದೇಶಕ ಲೋಕೇಶ್) ಮತ್ತು ರಜನಿಕಾಂತ್ ನಡುವಿನ ಮೊದಲ ಸಿನಿಮಾವಾಗಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ನಿರ್ಮಾಪಕರು ಇನ್ನೂ ತಾರಾಗಣವನ್ನು ಅಂತಿಮಗೊಳಿಸುತ್ತಿರುವಾಗಲೇ, ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಏತನ್ಮಧ್ಯೆ, ಸಲಗ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ವಿಜಯ್ ಕುಮಾರ್ ಅವರು ಈಗ ತಮ್ಮ ಮುಂದಿನ ನಿರ್ದೇಶನದ ಭೀಮಾ ಚಿತ್ರಮಂದಿರದಲ್ಲಿ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅಧಿಕೃತ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com