ಕಿಡ್ನಿ ಫೇಲ್ಯೂರ್ ಅಭಿಮಾನಿಗೆ ನಟ ದರ್ಶನ್ ಆರ್ಥಿಕ ನೆರವು, ನೆಟ್ಟಿಗರ ಮೆಚ್ಚುಗೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಭಿಮಾನಿಯೊಬ್ಬರಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಿಡ್ನಿ ಫೇಲ್ಯೂರ್ ಅಭಿಮಾನಿಯೊಂದಿಗೆ ದರ್ಶನ್ ಚಿತ್ರ
ಕಿಡ್ನಿ ಫೇಲ್ಯೂರ್ ಅಭಿಮಾನಿಯೊಂದಿಗೆ ದರ್ಶನ್ ಚಿತ್ರ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಭಿಮಾನಿಯೊಬ್ಬರಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದರ್ಶನ್ ಅವರಿಂದ ನೆರವು ಪಡೆದ ಅಭಿಮಾನಿ ಆದರ್ಶ್ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಹಂಚಿಕೊಂಡ ನಂತರ ಈ ವಿಷಯ  ಬೆಳಕಿಗೆ ಬಂದಿದೆ. 

ದರ್ಶನ್ ಅಭಿಮಾನಿಯಾಗಿರುವ ನನಗೆ ಎರಡೂ ಕಿಡ್ನಿ ಫೇಲ್ಯೂರ್ ಆಗಿತ್ತು. ನನಗೆ ಮೊದಲಿನಿಂದಲೂ ದರ್ಶನ್ ಸರ್ ಅವರನ್ನು ಭೇಟಿ ಮಾಡಬೇಕೆಂಬ ಆಸೆ ಇತ್ತು. ದರ್ಶನ್ ಆಪ್ತರಾದ ನಾಗರಾಜ್ ಅಣ್ಣನನ್ನು ಕೇಳಿಕೊಂಡೆ. ಅವರು ದರ್ಶನ್ ಅವರನ್ನು ಭೇಟಿ ಮಾಡಿಸಿದರು. ದರ್ಶನ್ ಸರ್ ಅವರಿಗೆ ತುಂಬಾ ಧನ್ಯವಾದಗಳು  ಎಂದು ಆದರ್ಶ್  ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ದರ್ಶನ್ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com