'ಘೋಸ್ಟ್' ಡಿಜಿಟಲ್ ಹಕ್ಕು ಪೆನ್ ಸ್ಟುಡಿಯೊ ಪಾಲು; ಭಾರಿ ಮೊತ್ತಕ್ಕೆ ಮಾರಾಟ!
ಶ್ರೀನಿ ನಿರ್ದೇಶನದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ 'ಘೋಸ್ಟ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅಕ್ಟೋಬರ್19 ರಂದು ದೇಶಾದ್ಯಂತ ತೆರೆಗೆ ಅಪ್ಪಳಿಸಲಿದೆ.
Published: 23rd September 2023 12:53 AM | Last Updated: 23rd September 2023 03:10 PM | A+A A-

ಘೋಸ್ಟ್ ಚಿತ್ರದಲ್ಲಿ ಶಿವಣ್ಣ
ಶ್ರೀನಿ ನಿರ್ದೇಶನದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ 'ಘೋಸ್ಟ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅಕ್ಟೋಬರ್19 ರಂದು ದೇಶಾದ್ಯಂತ ತೆರೆಗೆ ಅಪ್ಪಳಿಸಲಿದೆ.
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿರುವ ಈ ಚಿತ್ರದ ಥಿಯೇಟ್ರಿಕಲ್, ಲ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕಗಳು 'ಆರ್ ಆರ್ ಆರ್' ಜವಾನ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆಗೆ ಭಾರಿ ಮೊತ್ತಕ್ಕೆ ಮಾರಾಟವಾಗಿದೆ.
.#DrJayantilalGada of @PenStudios,distributors of blockbuster films #RRR and #the latest #Jawan mark their first #Kannada distribution,have bagged the exclusive rights for the Hindi theatrical, satellite, and digital distribution of @NimmaShivanna * #GHOST, at a phenomenal deal.… pic.twitter.com/qMHAIhqJRx
— A Sharadhaa (@sharadasrinidhi) September 21, 2023
ಇದನ್ನೂ ಓದಿ: ಲೆಜೆಂಡ್ಸ್’ ಮತ್ತು ‘ಥೆಸ್ಪಿಯನ್ಸ್’ ಎಂಬ ಪದ ನನಗೆ ಇಷ್ಟವಿಲ್ಲ; ನಾನು ಯಾವಾಗಲೂ ಹೊಸಬನಂತೆ ಕೆಲಸ ಮಾಡುತ್ತೇನೆ: ಅನುಪಮ್ ಖೇರ್
ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳನ್ನು ಹೊರತುಪಡಿಸಿ ಉಳಿದ ಭಾಷೆಗಳಲ್ಲಿ 'ಘೋಸ್ಟ್' ಚಿತ್ರವನ್ನು ಪೆನ್ ಸ್ಟುಡಿಯೊ ಬಿಡುಗಡೆ ಮಾಡುತ್ತಿದೆ. ಅಕ್ಟೋಬರ್ ಮೊದಲ ವಾರ ಚಿತ್ರದ ಪ್ರಚಾರಕ್ಕಾಗಿ ಶಿವರಾಜ್ ಕುಮಾರ್ ಮುಂಬೈ, ದೆಹಲಿ ಮತ್ತಿತರ ಕಡೆಗಳಿಗೆ ತೆರಳುತ್ತಿರುವುದಾಗಿ ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ.