ಹೊಂಬಾಳೆ ಫಿಲ್ಮ್ಸ್ನ ಬಹುನಿರೀಕ್ಷಿತ 'ಸಲಾರ್', 'ಯುವ' ಚಿತ್ರ ಒಂದೇ ದಿನ ಬಿಡುಗಡೆ?
ಹೊಂಬಾಳೆ ಫಿಲ್ಮ್ಸ್ ಹೊರ ತರುತ್ತಿರುವ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ಸಲಾರ್ ಹಾಗೂ ಕನ್ನಡ ಚಿತ್ರರಂಗ ಮೇರು ನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್ ನಟನೆಯ ಯುವ ಚಿತ್ರ ಒಂದೇ ದಿನ ಬಿಡುಗಡೆಯಾಗಲು ಸಜ್ಜಾಗಿವೆ.
Published: 28th September 2023 11:13 AM | Last Updated: 28th September 2023 01:19 PM | A+A A-

ಸಲಾರ್, ಯುವ ಚಿತ್ರದ ಸ್ಟಿಲ್
ಹೊಂಬಾಳೆ ಫಿಲ್ಮ್ಸ್ ಹೊರ ತರುತ್ತಿರುವ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ಸಲಾರ್ ಹಾಗೂ ಕನ್ನಡ ಚಿತ್ರರಂಗ ಮೇರು ನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್ ನಟನೆಯ ಯುವ ಚಿತ್ರ ಒಂದೇ ದಿನ ಬಿಡುಗಡೆಯಾಗಲು ಸಜ್ಜಾಗಿವೆ.
ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಇದೀಗ ಚಿತ್ರ ಬಿಡುಗಡೆ ದಿನಾಂಕವನ್ನು ಕೊನೆಗೂ ನಿರ್ಧರಿಸಿರುವ ಚಿತ್ರತಂಡ, ವಾರಾಂತ್ಯದ ವೇಳೆ ಅಧಿಕೃತವಾಗಿ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಚಿತ್ರವು ಡಿಸೆಂಬರ್ 22 ರಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಿವೆ.
ಒಂದು ವೇಳೆ ಚಿತ್ರ ಡಿಸೆಂಬರ್ 22ಕ್ಕೆ ಬಿಡುಗಡೆಯಾಗಿದ್ದೇ ಆದರೆ, ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಡಂಕಿಯೊಂದಿಗೆ ಪೈಪೋಟಿ ಎದುರಾಗಲಿದೆ.
ಇದನ್ನೂ ಓದಿ: ಯಶ್ 19 ಚಿತ್ರಕ್ಕೆ ರಾಖಿ ಭಾಯ್ ಸಿದ್ಧತೆ: ನವೆಂಬರ್ ನಲ್ಲಿ ಸೆಟ್ಟೇರಲಿದೆ ಸಿನಿಮಾ!
ಈ ನಡುವೆ ಯುವರಾಜ್ ಕುಮಾರ್ ನಟನೆಯ ಯುವ ಚಿತ್ರವನ್ನು ಡಿಸೆಂಬರ್ 22ಕ್ಕೆ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಇದರ ಜೊತೆಗೆ ನಟ ಧ್ರುವ ಸರ್ಜಾ ನಟನೆ ಮಾರ್ಟಿನ್ ಚಿತ್ರತಂಡ ಕೂಡ ಚಿತ್ರ ಬಿಡುಗಡೆಗೆ ಇದೇ ದಿನಾಂಕವನ್ನೇ ಫೈನಲ್ ಮಾಡಲು ಚಿಂತನೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ನಿಜವಾಗಿದ್ದೇ ಆದರೆ, ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಸಿನಿಪ್ರಿಯರಿಗೆ ಭರ್ಜರಿ ರಸದೌತಣ ಸಿಗುವುದಂತೂ ಖಚಿತ.
ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಟಿನ್ನು ಆನಂದ್, ಶ್ರೀಯಾ ರೆಡ್ಡಿ ಮತ್ತು ಪ್ರಮೋದ್ ನಟಿಸಿದ್ದು, ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಯುವರಾಜ್ ಕುಮಾರ್ ಅಭಿನಟದ ಯುವ ಚಿತ್ರಕ್ಕೆ ಸಪ್ತಮಿ ಗೌಡ ಅವರು ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.