ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ದಿ ಗೋಟ್ ಲೈಫ್': ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ರೂ.100 ಕೋಟಿ ಗಳಿಕೆ

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂನ ಆಡು ಜೀವಿತಂ ( ದಿ ಗೋಟ್ ಲೈಪ್ ) ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ಒಟ್ಟು ರೂ. 100 ಕೋಟಿ ಸಂಗ್ರಹಿಸಿದೆ ಎಂದು ಚಿತ್ರ ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ.
ಪೃಥ್ವಿರಾಜ್ ಸುಕುಮಾರನ್
ಪೃಥ್ವಿರಾಜ್ ಸುಕುಮಾರನ್

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂನ ಆಡು ಜೀವಿತಂ ( ದಿ ಗೋಟ್ ಲೈಪ್ ) ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ಒಟ್ಟು ರೂ. 100 ಕೋಟಿ ಸಂಗ್ರಹಿಸಿದೆ ಎಂದು ಚಿತ್ರ ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ.

ಬ್ಲೆಸ್ಸಿ ನಿರ್ದೇಶಿಸಿದ ಈ ಸಿನಿಮಾ 2008 ರಲ್ಲಿ ಹೆಚ್ಚು ಮಾರಾಟವಾದ ಬೆನ್ಯಾಮಿನ್ ಅವರ ಕಾದಂಬರಿ 'ಆಡು ಜೀವಿತಂ' ಆಧರಿಸಿದೆ. ಮಾರ್ಚ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಪೃಥ್ವಿರಾಜ್ ಸುಕುಮಾರನ್
Salaar: ಕನ್ನಡ ಸೇರಿ ಐದು ಭಾಷೆಗಳಲ್ಲೂ ಮಾಡಿದ ಪೃಥ್ವಿರಾಜ್ ಸುಕುಮಾರನ್ ಸ್ವತಃ ಡಬ್ಬಿಂಗ್‌!

"ಒಂದು ದೊಡ್ಡ ಮೈಲಿಗಲ್ಲನ್ನು ಸಾಧಿಸಿದ ದಿ ಗೋಟ್ ಲೈಪ್ ಬಿಡುಗಡೆಯಾದ ಒಂಬತ್ತು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗಳನ್ನು ದಾಟಿದೆ" ಎಂದು ಚಿತ್ರ ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಲಯಾಳಂ ಚಲನಚಿತ್ರವು ಸೌದಿ ಅರೇಬಿಯಾದ ಫಾರ್ಮ್‌ನಲ್ಲಿ ಮೇಕೆ ಮೇಯಿಸುವವನಾಗಿ ಬಲವಂತವಾಗಿ ಗುಲಾಮಗಿರಿಗೆ ಒಳಗಾಗುವ ಮಲಯಾಳಿ ವಲಸೆ ಕಾರ್ಮಿಕ ನಜೀಬ್ (ಸುಕುಮಾರನ್) ನ ನೈಜ ಜೀವನದ ಕಥಾ ಹಂದರವನ್ನು ಹೊಂದಿದೆ.

ಚಿತ್ರಕ್ಕೆ ಜನರಿಂದ ಸಿಕ್ಕ ಪ್ರತಿಕ್ರಿಯೆಯಿಂದ ಚಿತ್ರ ತಂಡ ಖುಷಿಯಾಗಿದೆ.“ಈ ಕನಸನ್ನು ನನಸಾಗಿಸಲು ಚಿತ್ರದ ಇಡೀ ತಂಡವು ತಮ್ಮ ಒಂದು ದಶಕದ ಶ್ರಮ ಮತ್ತು ರಕ್ತ, ಬೆವರು ಮತ್ತು ಕಣ್ಣೀರನ್ನು ವ್ಯಯಿಸಿದೆ. ಚಿತ್ರವು ಹದಿನಾರು ವರ್ಷಗಳಿಂದ ನನ್ನೊಂದಿಗೆ ಉಳಿದುಕೊಂಡಿದೆ ಮತ್ತು ಅಂತಿಮವಾಗಿ ಅದನ್ನು ನೋಡುವ ಸೌಭಾಗ್ಯವಾಗಿದೆ. ಪ್ರಪಂಚದಾದ್ಯಂತ ಇರುವ ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರಿಂದ ಪೂರ್ಣ ಹೃದಯದಿಂದ ಸ್ವೀಕರಿಸಲ್ಪಟ್ಟಿದೆ ಎಂದು ಬ್ಲೆಸ್ಸಿ ಹೇಳಿದ್ದಾರೆ

ಪೃಥ್ವಿರಾಜ್ ಪ್ರೊಡಕ್ಷನ್ಸ್ ಮೂಲಕ ಮಲಯಾಳಂನಲ್ಲಿ ದಿ ಗೋಟ್ ಲೈಫ್ ವಿತರಿಸಿರುವ ಸುಕುಮಾರನ್, ಚಿತ್ರ ಮೈಲಿಗಲ್ಲು ಸಾಧಿಸಿದ ಕ್ಷಣವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com