ರಜನಿ ಮಾತು ನಡೆಯಲಿಲ್ಲ: ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಧನುಷ್- ಐಶ್ವರ್ಯ ದಂಪತಿ

ದಕ್ಷಿಣ ಭಾರತ ಚಿತ್ರರಂಗದ ತಲೈವಾ ಎಂದೇ ಖ್ಯಾತರಾಗಿರುವ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ಪತಿ ಧನುಷ್ ಅವರಿಂದ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದಂಪತಿಗಳು ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ರಜನಿಕಾಂತ್-ಐಶ್ವರ್ಯಾ-ಧನುಷ್
ರಜನಿಕಾಂತ್-ಐಶ್ವರ್ಯಾ-ಧನುಷ್
Updated on

ದಕ್ಷಿಣ ಭಾರತ ಚಿತ್ರರಂಗದ ತಲೈವಾ ಎಂದೇ ಖ್ಯಾತರಾಗಿರುವ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ಪತಿ ಧನುಷ್ ಅವರಿಂದ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದಂಪತಿಗಳು ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಐಶ್ವರ್ಯ ಮತ್ತು ಧನುಷ್ ಅವರು 2022ರ ಜನವರಿ 17ರಂದು ಪರಸ್ಪರ ಪ್ರತ್ಯೇಕತೆಯನ್ನು ಘೋಷಿಸಿದ್ದರು. ಆದರೆ ನಂತರ ಅವರು ತಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶವನ್ನು ನೀಡಬಹುದು ಎಂದು ವರದಿಗಳಿವೆ. ಆದರೆ ಇತ್ತೀಚೆಗಿನ ಸುದ್ದಿ ಏನೆಂದರೆ ಇಬ್ಬರೂ ಕಾನೂನುಬದ್ಧವಾಗಿ ಪರಸ್ಪರ ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದಾರೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೆಕ್ಷನ್ 13ಬಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಧನುಷ್-ಐಶ್ವರ್ಯ

ಧನುಷ್ ಮತ್ತು ಐಶ್ವರ್ಯ ಸೆಕ್ಷನ್ 13-ಬಿ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ಅರ್ಥವೇನೆಂದರೆ, ಅವರು ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನವನ್ನು ಬಯಸುತ್ತಾರೆ. ಇಬ್ಬರ ಅರ್ಜಿಯ ವಿಚಾರಣೆ ಶೀಘ್ರದಲ್ಲೇ ನಡೆಯಲಿದೆ. 2022ರಲ್ಲಿ ಪ್ರತ್ಯೇಕತೆಯ ಘೋಷಣೆಯ ನಂತರ ಧನುಷ್ ಮತ್ತು ಐಶ್ವರ್ಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದಾಗ್ಯೂ, ಈ ಮಧ್ಯೆ, ಅವರು ತಮ್ಮ ಮಕ್ಕಳಾದ ಯಾತ್ರಾ ಮತ್ತು ಲಿಂಗ ಅವರೊಂದಿಗೆ ಶಾಲೆಯ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು.

ರಜನಿಕಾಂತ್-ಐಶ್ವರ್ಯಾ-ಧನುಷ್
18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಐಶ್ವರ್ಯ-ಧನುಷ್ ಲವ್ ಸ್ಟೋರಿ

18 ವರ್ಷಗಳ ದಾಂಪತ್ಯ ಜೀವನಕ್ಕೆ ಎಳ್ಳುನೀರು

ಧನುಷ್ ಮತ್ತು ಐಶ್ವರ್ಯಾ ಅವರ ದಾಂಪತ್ಯ ಜೀವನ 18 ವರ್ಷಗಳ ಮುಂದುವರೆದಿತ್ತು. ಈ ಜೋಡಿಯು 2004ರಲ್ಲಿ ವಿವಾಹವಾಗಿತ್ತು. ಆಗ ಧನುಷ್‌ಗೆ 21 ವರ್ಷ ಮತ್ತು ಐಶ್ವರ್ಯಾಗೆ 23 ವರ್ಷವಾಗಿತ್ತು. ಅಂದರೆ ಧನುಷ್ ಗಿಂತ ಐಶ್ವರ್ಯಾ ಎರಡು ವರ್ಷ ದೊಡ್ಡವಳು. ದಂಪತಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com