ನಟ ದ್ವಾರಕೀಶ್ ವಿಧಿವಶ: ಕಾಫಿ ಕುಡಿದು ಮಲಗಿದವರು ಮೇಲೇಳಲೇ ಇಲ್ಲ; ಕುಟುಂಬಸ್ಥರ ಮಾಹಿತಿ

ಕನ್ನಡ ಚಿತರಂಗದ ಹಿರಿಯ ನಟ ದ್ವಾರಕೀಶ್ ಅವರು ಮಂಗಳವಾರ ನಿಧನ ಹೊಂದಿದ್ದು, ದ್ವಾರಕೀಶ್ ಅವರ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕನ್ನಡ ಚಿತರಂಗದ ಹಿರಿಯ ನಟ ದ್ವಾರಕೀಶ್ ಅವರು ಮಂಗಳವಾರ ನಿಧನ ಹೊಂದಿದ್ದು, ದ್ವಾರಕೀಶ್ ಅವರ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ದ್ವಾರಕೀಶ್ ಅವರ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.

ಸಂಗ್ರಹ ಚಿತ್ರ
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ

ದ್ವಾರಕೀಶ್ ಅವರ ನಿಧನದ ಕುರಿತು ಈ ಹಿಂದೆ ವದಂತಿಗಳು ಹಬ್ಬಿದ್ದವು. ಈ ಬಾರಿಯೂ ಸಾವಿನ ಸುದ್ದಿ ಫೇಕ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕುಟುಂಬಸ್ಥರೇ ಸಾವಿನ ಕುರಿತು ಸ್ಪಷ್ಟನೆ ನೀಡಿದ್ದಾರೆ.

ರಾತ್ರಿ ಲೂಸ್ ಮೋಷನ್ ಆಗಿತ್ತು. ರಾತ್ರಿಯಿಡೀ ನಿದ್ರೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಆದರೆ, ಮಲಗಿದವರು ಮೇಲೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ ಎಂದು ದ್ವಾರಕೀಶ್ ಅವಕ ಪುತ್ರ ಯೋಗೇಶ್ ದ್ವಾರಕೀಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com