
ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿರುವ ಶರಣ್ಯಾ ಶೆಟ್ಟಿ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ರಿಲೀಸ್ ಗೆ ಸಿದ್ದವಾಗಿದೆ. 1980, ನಗುವಿನ ಹೂಗಳ ಮೇಲೆ, ಹುಟ್ಟು ಹಬ್ಬದ ಶುಭಾಷಯಗಳು ಮುಂತಾದ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವ ಅವರು, ಈ ಹೊಸ ಚಿತ್ರ ಬ್ರೇಕ್ ತಂದುಕೊಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತೆರೆ ಹಂಚಿಕೊಳ್ಳುವುದು ಪ್ರತಿಯೊಬ್ಬ ನಟಿಯ ಕನಸಾಗಿರುತ್ತದೆ. ಅಂತಹ ಕೆಲವೇ ಕೆಲವು ಅದೃಷ್ಟಶಾಲಿಗಳಲ್ಲಿ ನಾನು ಒಬ್ಬಳು ಎಂದಿದ್ದಾರೆ ಶರಣ್ಯ ಶೆಟ್ಟಿ. ಶ್ರೀನಿವಾಸ್ ರಾಜು ನಿರ್ದೇಶನದ ಈ ಚಿತ್ರದಲ್ಲಿ ಮಾಳವಿಕಾ ನಾಯರ್, ರಂಗಾಯಣ ರಘು, ಶ್ರುತಿ ಮತ್ತು ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಆಗಸ್ಟ್ 15 ರಂದು ಸಿನಿಮಾ ಬಿಡುಗಡೆಯಾಗಲಿದೆ.
ಈ ಸಿನಿಮಾ ಮೂಲಕ ನಾನು ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ನನಗೆ ಅನಿಸಿತು ಏಕೆಂದರೆ ನನ್ನ ಪ್ರೊಫೈಲ್ ಗೆ ಪಾತ್ರ ಹೊಂದಿಕೊಳ್ಳುತ್ತಿದೆ, ಆಡಿಷನ್ ಮೂಲಕ ನನಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆಯಿತು. ಕೃಷ್ಣಂ ಪ್ರಣಯ ಸಖಿಯಲ್ಲಿ, ಶರಣ್ಯ ಜಾನು ಎಂಬ ದಿಟ್ಟ ಮತ್ತು ಮನಮೋಹಕ ಸ್ವತಂತ್ರ ಮಹಿಳೆ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಎವರ್‌ಗ್ರೀನ್ ರೊಮ್ಯಾಂಟಿಕ್ ಹೀರೋ ಗಣೇಶ್ ಅವರೊಂದಿಗೆ ರೊಮ್ಯಾಂಟಿಕ್ ಹಾಡಿನಲ್ಲಿ ನಟಿಸಿರುವುದು ರೋಮಾಂಚನಗೊಂಡಿದ್ದೇನೆ.
ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಎಂದರೇ ಕೇವಲ ಉಡುಪು ಮಾತ್ರ ಅಲ್ಲ, ಇದು ಆತ್ಮವಿಶ್ವಾಸ ಮತ್ತು ಆಲೋಚನೆಯ ಪ್ರತೀಕವಾಗಿದೆ. ಈ ಚಿತ್ರದಲ್ಲಿ 45 ಹಿರಿಯ ಕಲಾವಿದರ ನಡುವೆ ಎದ್ದು ಕಾಣಲು ನಾನು ಉತ್ಸುಕಳಾಗಿದ್ದಾನೆ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಶರಣ್ಯಾ ತನ್ನ ಸಹನಟ ಗಣೇಶ್ ಬಗ್ಗೆ ಮಾತನಾಡಿದ, ಅವರು ತುಂಬಾ ಎನರ್ಜಿಟಿಕ್ ಎಂದಿದ್ದಾರೆ. ಆನ್ ಅಂಡ್ ಆಫ್-ಸ್ಕ್ರೀನ್ ಎರಡರಲ್ಲೂ ಅವರ ಕಾಮಿಕ್ ಟೈಮ್ ಅದ್ಭುತವಾಗಿದೆ, ಸದಾ ಖುಷಿಯಾಗಿರುತ್ತಾರೆ, ಯಾವುದೇ ಪರಿಸ್ಥಿತಿಗೆ ಸಲೀಸಾಗಿ ಹೊಂದಿಕೊಳ್ಳುತ್ತಾರೆ. ಗಣೇಶ್ ಅವರೊಂದಿಗೆ ಕೆಲಸ ಮಾಡುವುದು ನನಗೆ ನಟನೆ ಮಾಡುವಾಗ ಪ್ರೆಸೆನ್ಸ್ ಆಫ್ ಮೈಂಡ್ ಬಗ್ಗೆ ನ ಪ್ರಾಮುಖ್ಯತೆ ಬಗ್ಗೆ ಕಲಿತಿದ್ದೇನೆ ಎಂದು ಹೇಳಿದ್ದಾರೆ.
ದಂಡುಪಾಳ್ಯದ ಕ್ರೈಂ ಕಥೆಗೆ ಹೆಸರುವಾಸಿಯಾದ ನಿರ್ದೇಶಕ ಶ್ರೀನಿವಾಸ್ ರಾಜು ಅವರದ್ದು ಬಹುಮುಖ ಪ್ರತಿಭೆ. "ಅವರು ಪ್ರೇಮಕಥೆಯನ್ನು ನಿರ್ದೇಶಿಸುವುದನ್ನು ನೋಡಿ ಆಶ್ಚರ್ಯವಾಯಿತು. ವಿಭಿನ್ನ ಶೈಲಿಯ ಕಥೆ ಹೇಳುವ ಸಾಮರ್ಥ್ಯ ನೋಡಿ ನಾನು ಬೆರಗಾದೆ ಎಂದಿದ್ದಾರೆ. ಶರಣ್ಯ ಮೂರು ಪ್ರಾಜೆಕ್ಟ್‌ಗಳನ್ನು ಹೊಂದಿದ್ದು, ಪ್ರೊಡಕ್ಷನ್ ಹೌಸ್‌ಗಳಿಂದ ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿದ್ದಾರೆ.
Advertisement