
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿರುವ ನಟ ಗಣೇಶ್, ಈಚಿತ್ರ ತನ್ನ ವೃತ್ತಿಜೀವನದ ಅತಿದೊಡ್ಡ ಬಜೆಟ್ ಚಿತ್ರವಾಗಿದೆ ಎಂದು ಹೇಳಿದ್ದಾರೆ.
ದಂಡುಪಾಳ್ಯ ನಿರ್ದೇಶಕ ಶ್ರೀನಿವಾಸ್ ರಾಜು ಚಿತ್ರದ ಕಥೆಯನ್ನು ಹೇಳಿದಾಗ, ಇದು ನನ್ನ ಪ್ರಕಾರದ ಬದಲಾವಣೆಯಾಗಬಹುದು ಎಂದು ನಾನು ಭಾವಿಸಿದೆ. ಆದರೆ ಎಂಟು ನಾಯಕಿಯರಿದ್ದಾರೆ ಎಂದು ಅವರು ಹೇಳಿದಾಗ, ಈ ಕಥೆಯು ನನ್ನೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ ಎಂದು ನನಗೆ ತಿಳಿಯಿತು ಎಂದು ಗಣೇಶ್ ಹಂಚಿಕೊಂಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಬಲವಾದ ಕಥಾ ನಿರೂಪಣೆಯನ್ನು ಹೊಂದಿದೆ. ಕನ್ನಡ ಚಲನಚಿತ್ರೋದ್ಯಮದ ಹಿರಿಯ ನಟರೊಂದಿಗೆ ಅಭಿನಯಿಸಲು ಸಂತೋಷವಾಗಿದೆ ಮತ್ತು ನನ್ನ ಈ ಸಿನಿ ಜರ್ನಿಯನ್ನು ಪ್ರೇಕ್ಷಕರು ಸಂಪೂರ್ಣವಾಗಿ ಆನಂದಿಸುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ರಾಜು, ಈ ಕಥೆ ಗಣೇಶ್‌ಗೆ ಹೇಳಿ ಮಾಡಿಸಿದಂತಿದೆ ಮತ್ತು ಅವರು ಸೇರಿದಂತೆ ಇಡೀ ಚಿತ್ರತಂಡದ ಅಭಿನಯವು ಅತ್ಯುತ್ತಮವಾಗಿದೆ. ತಾಂತ್ರಿಕ ಅಂಶಗಳೂ ಶ್ಲಾಘನೀಯ. ಚಿತ್ರದಲ್ಲಿ ಅರ್ಜುನ್ ಜನ್ಯ ಸಂಯೋಜಿಸಿರುವ ಆರು ಹಾಡುಗಳಿವೆ. ಎರಡು ಹಾಡು ಈಗಾಗಲೇ ಬಿಡುಗಡೆಯಾಗಿದೆ ಮತ್ತು ಚಿನ್ನಮ್ಮ ಟ್ರ್ಯಾಕ್ ಪ್ರೇಕ್ಷಕರ ಗಮನ ಸೆಳೆದಿದೆ ಎಂದಿದ್ದಾರೆ. ತ್ರಿಶೂಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಜೆ ರುದ್ರಪ್ಪ ನಿರ್ಮಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಮಾಳವಿಕಾ ನಾಯರ್ ಮತ್ತು ಶರಣ್ ಶೆಟ್ಟಿ ಜೊತೆಗೆ ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಿವದ್ವಾಜ್ ಮತ್ತು ಗಿರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Advertisement