ಗಣೇಶ್ ನಟನೆಯ 41ನೇ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಸ್ವಾತಂತ್ರ್ಯ ದಿನಾಚರಣೆಗೆ ರಿಲೀಸ್!

ಗೋಲ್ಡನ್ ಸ್ಟಾರ್ ಗಣೇಶ್ ಬಾನ ದಾರಿಯಲ್ಲಿ ಸಿನಿಮಾ ನಂತರ ಮತ್ತೆ ಯಾವುದೇ ಚಿತ್ರಗಳು ರಿಲೀಸ್ ಆಗಿರಲಿಲ್ಲ, ಈಗ ತಮ್ಮ 41ನೇ ಸಿನಿಮಾ ರಿಲೀಸ್ ಗಾಗಿ ಗಣೇಶ್ ಸಜ್ಜಾಗಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಸಿನಿಮಾ ಸ್ಟಿಲ್
ಕೃಷ್ಣಂ ಪ್ರಣಯ ಸಖಿ ಸಿನಿಮಾ ಸ್ಟಿಲ್

ಗೋಲ್ಡನ್ ಸ್ಟಾರ್ ಗಣೇಶ್ ಬಾನದಾರಿಯಲ್ಲಿ ಸಿನಿಮಾ ನಂತರ ಮತ್ತೆ ಯಾವುದೇ ಚಿತ್ರಗಳು ರಿಲೀಸ್ ಆಗಿರಲಿಲ್ಲ, ಈಗ ತಮ್ಮ 41ನೇ ಸಿನಿಮಾ ರಿಲೀಸ್ ಗಾಗಿ ಗಣೇಶ್ ಸಜ್ಜಾಗಿದ್ದಾರೆ.

ಶ್ರೀನಿವಾಸ್ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ಸ್ವಾತಂತ್ರ್ಯ ದಿನಾಚರಣೆಯನ್ನು (ಆಗಸ್ಟ್ 15) ಬಿಡುಗಡೆ ಮಡಲು ನಿರ್ಧರಿಸಲಾಗಿದೆ. ಇತ್ತೀಚೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ಚಿತ್ರದ ಎರಡನೇ 'ಚಿನ್ನಮ್ಮ' ಸಾಂಗ್ ರಿಲೀಸ್ ಮಾಡಲಾಯಿತು, ಇದು ಎರಡನೇ ಹಾಡಾಗಿದೆ. ಈ ಹಾಡು ಈಗ ಆನಂದ್ ಆಡಿಯೊದ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ಈ ಸಮಾರಂಭದಲ್ಲಿ ಗಣೇಶ್, ನಿರ್ದೇಶಕ ಶ್ರೀನಿವಾಸ್ ರಾಜು ಹಾಗೂ ನಟ ಶಶಿಕುಮಾರ್ ಭಾಗವಹಿಸಿದ್ದರು.

ಚಿತ್ರಕ್ಕಾಗಿ ಅರ್ಜುನ್ ಜನ್ಯ ಒಟ್ಟು ಏಳು ಹಾಡುಗಳನ್ನು ಸಂಯೋಜಿಸಿದ್ದಾರೆ. ಎರಡನೇ ಹಾಡು, 'ಚಿನ್ನಮ್ಮ', ಸಾಂಗ್ ಗೆ ಕವಿ ರಾಜ್ ಸಾಹಿತ್ಯ ಬರೆದಿದ್ದಾರೆ. ಕೈಲಾಶ್ ಖೇರ್ ಮತ್ತು ಇಂದು ನಾಗರಾಜ್ ಅವರು ಹಾಡಿದ್ದಾರೆ. ಶೇಖರ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ವೆಂಕಟ್ ರಾಮಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಸಿನಿಮಾ ಸ್ಟಿಲ್
ವಿಯೆಟ್ನಾಂನಲ್ಲಿ ಅಂತಿಮ ಹಂತದ ಚಿತ್ರೀಕರಣಕ್ಕೆ 'ಕೃಷ್ಣಂ ಪ್ರಣಯ ಸಖಿ' ಚಿತ್ರತಂಡ ಸಜ್ಜು

ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ತಂಡದ ಪ್ರಯತ್ನ ಮತ್ತು ಸಹಕಾರದಿಂದಾಗಿ ಚಿತ್ರದ ಔಟ್‌ಪುಟ್ ಅತ್ಯುತ್ತಮವಾಗಿದೆ ಎಂದು ಹೇಳಿದರು. ತ್ರಿಶೂಲ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಜಿ ರುದ್ರಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ಮಾಳವಿಕಾ ನಾಯಕ್ ನಾಯಕಿಯಾಗಿ ನಟಿಸುತ್ತಿದ್ದು, ಶರಣ್ಯ, ಶ್ರೀನಿವಾಸ ಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶೃತಿ, ಭಾವನಾ, ಅಶೋಕ್, ರಾಮಕೃಷ್ಣ, ಶಿವದ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ್ ಮತ್ತು ಗಿರಿ ಶಿವಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com