
ಶ್ರೀನಿವಾಸ್ ರಾಜು ನಿರ್ದೇಶನದ ಗಣೇಶ್ ನಟನೆಯ ಮುಂಬರುವ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು, ವಿಯೆಟ್ನಾಂನಲ್ಲಿ ಅಂತಿಮ ಹಂತದ ಚಿತ್ರೀಕರಣಕ್ಕೆ ಚಿತ್ರತಂಡವು ತಯಾರಿ ನಡೆಸುತ್ತಿದೆ.
ಎರಡು ಹಾಡುಗಳು ಮತ್ತು ಕೆಲವು ಹೆಚ್ಚುವರಿ ದೃಶ್ಯಗಳಿಗೆ ಪ್ಲಾನ್ ಮಾಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸದ್ಯ ಅವರು ವಿಯೆಟ್ನಾಂನಲ್ಲಿದ್ದು, ಗಣೇಶ್, ಮಾಳವಿಕಾ ನಾಯರ್ ಮತ್ತು ಶರಣ್ಯ ಶೆಟ್ಟಿ ಮಾರ್ಚ್ ಮೊದಲ ವಾರದಲ್ಲಿ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
'ನಾನು ಈ ಶೆಡ್ಯೂಲ್‌ನಲ್ಲಿ ಚಿತ್ರೀಕರಣವನ್ನು ಮುಗಿಸುತ್ತೇನೆ ಮತ್ತು ಅಗತ್ಯವಿದ್ದರೆ, ಉಳಿದಿರುವ ಯಾವುದೇ ದೃಶ್ಯಗಳನ್ನು ಮೈಸೂರಿನಲ್ಲಿ ಶೂಟ್ ಮಾಡುತ್ತೇನೆ' ಎಂದು ಶ್ರೀನಿವಾಸ್ ರಾಜು ಚಿತ್ರದ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ನಟ ಮತ್ತು ನಿರ್ದೇಶಕರ ನಡುವಿನ ಮೊದಲ ಚಿತ್ರ ಇದಾಗಿದ್ದು, ಸುಧಾರಾಣಿ, ಸಾಧು ಕೋಕಿಲ ಮತ್ತು ಗಿರಿ ಶಿವಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತ್ರಿಶೂಲ್ ಎಂಟರ್ಟೈನ್‌ಮೆಂಟ್ಸ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
ಕೊನೆಯದಾಗಿ 'ಬಾನದಾರಿಯಲ್ಲಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಗಣೇಶ್ ಸದ್ಯ ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ಬ್ಯುಸಿಯಾಗಿದ್ದು, ತಮ್ಮ ಮುಂದಿನ ಯೋಜನೆಯನ್ನು ಇನ್ನೂ ಘೋಷಿಸಿಲ್ಲ.
Advertisement