ಶಿವರಾಜಕುಮಾರ್ ನಟನೆಯ 131 ನೇ ಆಕ್ಷನ್ ಚಿತ್ರದಲ್ಲಿ 'ಗುಲ್ಟೂ' ನವೀನ್ ಶಂಕರ್!

ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಬಹುದಾಗಿದೆ. ಸಿನಿಮಾಗೆ ಪ್ರಸಿದ್ಧ ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್ ಅವರ ರೋಮಾಂಚಕ ಮ್ಯೂಸಿಕ್ ಇರಲಿದೆ.
ನವೀನ್ ಶಂಕರ್
ನವೀನ್ ಶಂಕರ್
Updated on

ತಮಿಳಿನ ಪಾಯುಂ ಒಲಿ ನೀ ಎನಕ್ಕು ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಕಾರ್ತಿಕ್ ಅದ್ವೈತ್, ಶಿವರಾಜಕುಮಾರ್ ಅಭಿನಯದ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ.

ಬಹುಭಾಷಾ ಸಿನಿಮಾದ ಶೂಟಿಂಗ್ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಬಹುದಾಗಿದೆ. ಸಿನಿಮಾಗೆ ಪ್ರಸಿದ್ಧ ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್ ಅವರ ರೋಮಾಂಚಕ ಮ್ಯೂಸಿಕ್ ಇರಲಿದೆ. ಇದರ ಜೊತೆಗೆ ಜನಪ್ರಿಯ ನಟ ನವೀನ್ ಶಂಕರ್ ಕೂಡ ಈ ಪ್ರಾಜೆಕ್ಟ್ ನ ಭಾಗವಾಗಲಿದ್ದಾರೆ. ಗುಲ್ಟೂ ಚಿತ್ರದಲ್ಲಿನ ಚೊಚ್ಚಲ ಅಭಿನಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ನವೀನ್ ಕೊನೆಯದಾಗಿ ಪ್ರಶಾಂತ್ ನೀಲ್ ಅವರ ಸಲಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಶಿವರಾಜಕುಮಾರ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಡೈನಾಮಿಕ್ ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿ ಈಗಾಗಲೇ ಅಪಾರವಾದ ನಿರೀಕ್ಷೆ ಸೃಷ್ಟಿಸುತ್ತಿದೆ, ಟಗರು ಸಿನಿಮಾದಲ್ಲಿ ಧನಂಜಯ್ ಜೊತೆಗಿನ ಆನ್-ಸ್ಕ್ರೀನ್ ಮ್ಯಾಜಿಕ್ ನೆನಪಿಸುತ್ತದೆ. ಪಾತ್ರದ ಬಗ್ಗೆ ಅಧಿಕೃತ ಪ್ರಕಟಣೆಯಷ್ಟೆ ಹೊರಬೀಳ ಬೇಕಿದೆ. ಎನ್ ಎಸ್ ರೆಡ್ಡಿ ಮತ್ತು ಸುಧೀರ್ ಅವರ ಬೆಂಬಲದೊಂದಿಗೆ, ಚಿತ್ರದ ತಾಂತ್ರಿಕ ತಂಡದಲ್ಲಿ ಬರಹಗಾರರಾದ ವಿಎಂ ಪ್ರಸನ್ನ ಮತ್ತು ಜಯ ಕೃಷ್ಣ, ಛಾಯಾಗ್ರಾಹಕ ಎಜೆ ಶೆಟ್ಟಿ ಮತ್ತು ಕಲಾ ನಿರ್ದೇಶಕ ರವಿ ಸಂತೆಹಖ್ಲು ಇದ್ದಾರೆ. ಈ ಸಿನಿಮಾದ ಜೊತೆಗೆ, ನವೀನ್ ಶಂಕರ್ ಬಾಕ್ಸಿಂಗ್ ವಿಷಯದ ಸುತ್ತ ಕೇಂದ್ರೀಕೃತವಾಗಿರುವ ವಿಕಾಸ್ ಪುಷ್ಪಗಿರಿ ಅವರ ಮುಂಬರುವ ಚಿತ್ರದಲ್ಲಿ ನಟಿಸಲು ಸಹ ಸಿದ್ಧರಾಗಿದ್ದಾರೆ. ಏತನ್ಮಧ್ಯೆ, ಸದಾ ಬ್ಯುಸಿಯಾಗಿರುವ ಶಿವರಾಜಕುಮಾರ್ ಭೈರತಿ ರಣಗಲ್ ಬಿಡುಗಡೆಗೆ ಕಾಯುತ್ತಿದ್ದಾರೆ ಮತ್ತು ತಮ್ಮ 131 ನೇ ಚಿತ್ರವನ್ನು ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ.

ನವೀನ್ ಶಂಕರ್
ರಾಮ್ ಚರಣ್ ಮುಂದಿನ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್! ಚಿತ್ರ ತಂಡದಿಂದ ಘೋಷಣೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com