ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ನಟ ಗುರುನಂದನ್, 2019 ರಲ್ಲಿ ಮಿಸ್ಸಿಂಗ್ ಬಾಯ್ ನಂತರ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ.
ಈ ಮಧ್ಯೆ, ಅವರು ಮೂರು ಸಿನಿಮಾಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ರಾಜು ಜೇಮ್ಸ್ ಬಾಂಡ್, ಫಾರೆಸ್ಟ್ ಮತ್ತು ಹ್ಯಾಪಿ ಎಂಡಿಂಗ್- ಸಿನಿಮಾ ಬಿಡುಗಡೆಗೆ ಸಿದ್ಧವಾಗಿವೆ. ಇದರ ಜೊತೆಗೆ ಗುರುನಂದನ್ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪಾತ್ರದಲ್ಲಿ ಹೊಸ ಸಿನಿಮಾ ಪ್ರಾರಂಭಿಸಿದ್ದಾರೆ. ಈ ಸಿನಿಮಾ ಮೂಹೂರ್ತ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಪ್ರಕಾಶ್ ಶೆಟ್ಟಿ ಭಾಗವಹಿಸಿದ್ದರು. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಈ ಹಿಂದೆ ಕೆಮಿಸ್ಟ್ರಿ ಆಫ್ ಕಾರಿಯಪ್ಪ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಸುಮಂತ್ ಗೌಡ ನಿರ್ದೇಶನ ಮಾಡುತ್ತಿದ್ದಾರೆ. ಚೊಚ್ಚಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಗುರುನಂದನ್ ಅವರು ತಮ್ಮ ಬ್ಯಾನರ್, ಮಂಡಿ ಮನೆ ಟಾಕೀಸ್ ಅಡಿಯಲ್ಲಿ ಪ್ರೊಡಕ್ಷನ್ ನಂ 1 ವರ್ಕಿಂಗ್ ಶೀರ್ಷಿಕೆಯೊಂದಿಗೆ ಚಿತ್ರ ನಿರ್ಮಿಸಲಿದ್ದಾರೆ. ಈ ಕೌಟುಂಬಿಕ ಹಾಸ್ಯ ಮನರಂಜನಾ ಸಿನಿಮಾಗಾಗಿ ಗುರುನಂದನ್ ವಿವಿಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಗಳಿಂದ ಅದರಲ್ಲೂ, ವಿಶೇಷವಾಗಿ ಉತ್ತರ ಕರ್ನಾಟಕದವರಿಂದ ಸ್ಫೂರ್ತಿ ಪಡೆದಿದ್ದಾರೆ. ಸಿನಿಮಾ ಶೂಟಿಂಗ್ ಆರಂಭವಾಗಿದ್ದು, 45 ದಿನಗಳ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಮೊದಲಿಗೆ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಹರಿಕಥೆ ಅಲ್ಲ ಗಿರಿಕಥೆ ನಾಯಕಿ ತಪಸ್ವಿನಿ ಪೂಣಚ್ಚ ಗುರುನಂದನ್ ಜೊತೆ ನಟಿಸಲಿದ್ದಾರೆ. ಶರತ್ ಚಕ್ರವರ್ತಿ ಚಿತ್ರಕಥೆ ಬರೆದಿದ್ದಾರೆ, ಈ ಹಿಂದೆ ಗುರುನಂದನ್ ಅವರ ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ಕೆಲಸ ಮಾಡಿದ್ದ ಕಿರಣ್ ರವೀಂದ್ರ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಭೀಮಾ ಚಿತ್ರದಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ಶಿವಸೇನೆ ಛಾಯಾಗ್ರಹಣವಿದೆ.
Advertisement