70ನೇ ರಾಷ್ಟ್ರ ಪ್ರಶಸ್ತಿ ವಿಜೇತರ ಪಟ್ಟಿ ಘೋಷಣೆಯಾಗಿದೆ. 2022ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಕೋವಿಡ್ ಕಾರಣದಿಂದ ಕೆಲವು ವರ್ಷ ರಾಷ್ಟ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂದೂಡಲಾಗಿತ್ತು. ಹೀಗಾಗಿ, 2022ರಲ್ಲಿ ತೆರೆಕಂಡು ಜನಮನ್ನಣೆ ಪಡೆದ ಸಿನಿಮಾಗಳಿಗೆ ರಾಷ್ಟ್ರಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. 2022ನೇ ಸಾಲಿನ ರಾಷ್ಟ್ರ ಪ್ರಶಸ್ತಿಯಲ್ಲಿ ಕನ್ನಡದ ಎರಡು ಸಿನಿಮಾಗಳಿಗೆ ಪ್ರಶಸ್ತಿಯನ್ನು ಬಾಚಿಕೊಂಡಿದೆ.
'ಕೆಜಿಎಫ್ 2' ಹಾಗೂ 'ಕಾಂತಾರ' ಸಿನಿಮಾಗಳಿಗೆ ಪ್ರಶಸ್ತಿ ಲಭಿಸಿದೆ. 'ಕಾಂತಾರ' ಸಿನಿಮಾದ ನಟನೆಗಾಗಿ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಬಹಳ ದಿನಗಳ ಬಳಿಕ ಕನ್ನಡದ ನಟನಿಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಕನ್ನಡಿಗರಿಗೆ ಖುಷಿಕೊಟ್ಟಿದೆ.
ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬರುತ್ತಿದ್ದಂತೆ ಪತಿಯ ಕುರಿತು ಪತ್ನಿ ಪ್ರಗತಿ ರಿಷಭ್ ಶೆಟ್ಟಿಯವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್'ಸ್ಟಾಗ್ರಾಮ್ ನಲ್ಲಿ ಪತಿಯನ್ನು ಸ್ವಾಗತಿಸುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಅವರು, ಸಿನಿಮಾದ ಮೇಲಿನ ಅವರ ಸಮರ್ಪಣೆ ಮತ್ತು ಉತ್ಸಾಹಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಿಮ್ಮ ಕಠಿಣ ಪರಿಶ್ರಮ, ತಡರಾತ್ರಿಯವರೆಗಿನ ಕೆಲಸ, ತ್ಯಾಗ ನಿಜಕ್ಕೂ ಫಲ ನೀಡಿದೆ. ನಿಮ್ಮ ಸಾಧನೆ ಹೆಮ್ಮ ತಂದಿದೆ ಎಂದು ಹೇಳಿದ್ದಾರೆ.
ಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿರುವ ರಿಷಭ್ ಶೆಟ್ಟಿಯವರು, ನನ್ನ ಇಡೀ ತಂಡದಿಂದ ಇದು ಸಾಧ್ಯವಾಯಿತು. ನಾನು ಚಿತ್ರದ ಪ್ರಮುಖ ಭಾಗ ಎನಿಸಿದರು, ಚಿತ್ರ ತಂಡದ ಕಠಿಣ ಪರಿಶ್ರಮ, ನಿರ್ಮಾಣ ಸಂಸ್ಥೆ, ತಂತ್ರಜ್ಞರು ಇದಕ್ಕೆಲ್ಲ ಕಾರಣರಾಗಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆ ತಮಗೆ ಶುಭಾಶಯ ತಿಳಿಸುತ್ತಿರುವ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕದ ಜನತೆಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಚಿತ್ರವನ್ನು ಗುರುತಿಸಿದ ರಾಷ್ಟ್ರ ಪ್ರಶಸ್ತಿ ಸಮಿತಿಗೆ ಧನ್ಯವಾದ ಹೇಳುತ್ತೇನೆ. ಜನರು ಈ ಚಿತ್ರ ಗೆಲ್ಲುವಂತೆ ಮಾಡಿದ್ದಾರೆ, ನನಗೆ ತುಂಬಾ ಸಂತೋಷವಾಗಿದೆ. ಈ ಗೆಲುವನ್ನು ಕರ್ನಾಟಕದ ಜನತೆಗೆ ಅರ್ಪಿಸುತ್ತೇನೆಂದು ತಿಳಿಸಿದ್ದಾರೆ.
Advertisement