
ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರು ಬಾಲಿವುಡ್ ಮಂದಿ ಭಾರತವನ್ನು ಕೆಟ್ಟದಾಗಿ ತೋರಿಸಿ ವಿದೇಶಿಗಳಲ್ಲಿ ಅವಾರ್ಡ್ ಗೆಲ್ತಾರೆ ಎಂದು ಹೇಳಿದ್ದು ಈ ಹೇಳಿಕೆ ಕುರಿತಂತೆ ನಟನನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
2022ರ ಹಿಟ್ ಚಿತ್ರ ಕಾಂತಾರದ ಅಭಿನಯಕ್ಕಾಗಿ ರಿಷಬ್ ಇತ್ತೀಚೆಗಷ್ಟೇ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಈಗ ವಿಡಿಯೋವೊಂದರಲ್ಲಿ ಅವರು ಬಾಲಿವುಡ್ ಕುರಿತಂತೆ ಕೆಲ ನೀಡಿರುವ ಹೇಳಿಕೆ ನೆಟ್ಟಿಗರನ್ನು ಕೆರಳಿಸಿದೆ. ರಿಷಬ್ ಬಾಲಿವುಡ್ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾಂತಾರ ಚಿತ್ರದಲ್ಲಿ ನಾಯಕಿಯ ಸೊಂಟವನ್ನು ಚಿವುಟುವ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಿಷಬ್ ಶೆಟ್ಟಿಯ ವಿಡಿಯೋವೊಂದಕ್ಕೆ ಸಿನಿಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಮೆಟ್ರೋಸಾಗಾಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಕ್ರಿಸ್ಟೋಫರ್ ಕನಕರಾಜ್ ಎಂಬ ವ್ಯಕ್ತಿ ರಿಷಬ್ ಅವರ ಕ್ಲಿಪ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ 'ಭಾರತೀಯ ಚಲನಚಿತ್ರಗಳು, ವಿಶೇಷವಾಗಿ ಬಾಲಿವುಡ್, ಭಾರತದ ಇಮೇಜ್ ಅನ್ನು ಕಳಂಕಗೊಳಿಸುತ್ತದೆ. ಈ ಕಲಾತ್ಮಕ ಚಲನಚಿತ್ರಗಳನ್ನು ಜಾಗತಿಕ ಕಾರ್ಯಕ್ರಮಗಳು ಮತ್ತು ರೆಡ್ ಕಾರ್ಪೆಟ್‌ಗಳಿಗೆ ಆಹ್ವಾನಿಸಲಾಗುತ್ತದೆ. ನನ್ನ ರಾಷ್ಟ್ರ, ನನ್ನ ರಾಜ್ಯ, ನನ್ನ ಭಾಷೆ, ನನ್ನ ಹೆಮ್ಮೆ. ಜಾಗತಿಕವಾಗಿ ಅದನ್ನು ಸಕಾರಾತ್ಮಕ ರೀತಿಯಲ್ಲಿ ಏಕೆ ತೆಗೆದುಕೊಳ್ಳಬಾರದು ಮತ್ತು ನಾನು ಅದೇ ರೀತಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರು.
ವೈರಲ್ ಕ್ಲಿಪ್ ಕುರಿತು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಕಾಂತಾರ ಚಿತ್ರದಲ್ಲಿನ ದುರ್ವರ್ತನೆಯನ್ನು ವೈಭವೀಕರಿಸುವ ಬಗ್ಗೆ ನೀವು ಏನು ಹೇಳುತ್ತೀರಿ? ಮತ್ತೊಬ್ಬರು ಯಶಸ್ಸು ಬರುತ್ತದೆ ಮತ್ತು ಹೋಗುತ್ತದೆ ಆದರೆ ಮಹಿಳೆಯರ ಸೊಂಟವನ್ನು ಚಿವುಟುವುದು ಮತ್ತು ಬಾಲಿವುಡ್ ಬಗ್ಗೆ ನಕಾರಾತ್ಮಕ ಮಾತುಗಳನ್ನು ಹೇಳುವುದು ಶಾಶ್ವತ ಎಂದು ಬರೆದಿದ್ದಾರೆ. ಈತ ಕಟ್ಟಾ ಬಾಲಿವುಡ್ ದ್ವೇಷಿ ಎಂದು ಒಬ್ಬರು ಬರೆದಿದ್ದಾರೆ.
Advertisement