ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್ ಫ್ಲೈ’ ಶೂಟಿಂಗ್ ಮುಕ್ತಾಯವಾಗಿದೆ.
ವಂಶಿ ಚೊಚ್ಚಲ ನಿರ್ದೇಶನದ ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವೀಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರದ ಶೂಟಿಂಗ್ ಪೂರ್ಣಗೊಂಡ ಸಂಭ್ರಮಾಚರಣೆಗಾಗಿ ಚಿತ್ರತಂಡ ಫೈರ್ ಫ್ಲೈ’ ಪಯಣದ ಝಲಕ್ ನ್ನು ಚಿತ್ರತಂಡ ಹಂಚಿಕೊಂಡಿದೆ.
ಫೈರ್ ಫ್ಲೈ’ ಪಯಣದ ಬಗ್ಗೆ ನಿವೇದಿತಾ ಶಿವರಾಜ್ ಕುಮಾರ್ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಚಿಕ್ಕವಳಿದ್ದಾಗಿನಿಂದಲೂ ಸಿನಿಮಾ ಮತ್ತು ಕಥೆಗಳೊಡನೆ ಬೆಳೆದಿದ್ದು, ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂದು ಕಂಡ ಕನಸಿಗೆ ‘ಫೈರ್ ಫ್ಲೈ’ ಸಿನಿಮಾ ಮೊದಲ ಹೆಜ್ಜೆಯಾಗಿದೆ. ಇದರ ಚಿತ್ರೀಕರಣ ಇನ್ನೇನು ಮುಗಿಯುತ್ತಿರಲು, ನಿರ್ದೇಶಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು. ಅತ್ಯದ್ಭುತ ಪ್ರತಿಭೆಗಳು ಹಾಗೂ ನನ್ನ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರೂ ಹಾಗೂ ಅವರೊಡನೆ ಮೂಡಿದ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು ಎಂದಿದ್ದಾರೆ.
ಪ್ರತಿಯೊಂದು ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ ‘ಫೈರ್ ಫ್ಲೈ’ ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ ಎಂದು ಪತ್ರದ ಮೂಲಕ ಮನದ ಮಾತು ಹಂಚಿಕೊಂಡಿದ್ದಾರೆ.
ಪ್ರತಿಯೊಂದು ಪ್ರಯಾಣವು ಅದರ ಅಂತ್ಯವನ್ನು ಹೊಂದಿರುವಾಗ, ಫೈರ್‌ಫ್ಲೈ ಪೂರ್ಣಗೊಳ್ಳುವಿಕೆಯು ಹೊಸ ಸಾಹಸದ ಪ್ರಾರಂಭದಂತೆ ಭಾಸವಾಗುತ್ತದೆ. ನಾವು ನಮ್ಮ ಚಲನಚಿತ್ರವನ್ನು ಅಂತರತಾರಾ ಬೆಳಕಿನ ಹುಡುಕಾಟದ ಕಥೆಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುವ ಕ್ಷಣವನ್ನು ನಾನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ವಂಶಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಚಿತ್ರದಲ್ಲಿ ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಫೈರ್ ಫ್ಲೈ ಪಾತ್ರದಲ್ಲಿ ಶೀತಲ್ ಶೆಟ್ಟಿ ಮತ್ತು ಹಿರಿಯ ಕಲಾವಿದ ಮೂಗು ಸುರೇಶ್ ಜೊತೆಗೆ ಸುಧಾರಾಣಿ ಮತ್ತು ಅಚ್ಯುತ್ ಕುಮಾರ್ ಮುಂತಾದ ಪ್ರಮುಖ ನಟರು ಇದ್ದಾರೆ. ಅಭಿಲಾಷ್ ಕಲಾತಿ ಅವರ ಛಾಯಾಗ್ರಾಹಣವಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದು, ಜೈ ರಾಮ್ ಸಹ ನಿರ್ದೇಶಕರಾಗಿದ್ದಾರೆ.
Advertisement