ಆಗಸ್ಟ್ 15 ರಂದು ಬಿಡುಗಡೆಯಾದ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಿನಿಮಾ ಕೌಟುಂಬಿಕ ಪ್ರೈಕ್ಷಕರನ್ನು ಸೆಳೆಯುತ್ತಿದೆ. ಕೃಷ್ಣ ಪ್ರಣಯ ಸಖಿ ಸಿನಿಮಾ ಜೊತೆಗೆ 11 ಚಿತ್ರಗಳು ರಿಲೀಸ್ ಆಗಿದ್ದು ತೀವ್ರ ಸ್ಪರ್ಧೆ ಎದುರಿಸಬೇಕಾಗಿತ್ತು, ಹೀಗಿದ್ದರೂ ಈ ರೋಮ್ಯಾಂಟಿಕ್ ಕೌಟುಂಬಿಕ ಸಿನಿಮಾವೂ ಭಾರಿ ಹಿಟ್ ಆಗಿದ್ದು, ಕರ್ನಾಟಕದಾದ್ಯಂತ ಪ್ರೇಕ್ಷಕರನ್ನು ಸೆಳೆಯುತ್ತಿದೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಗಮನಾರ್ಹ ಸಂಗ್ರಹ ಮಾಡಿದೆ.
ಚಿತ್ರದ ಯಶಸ್ಸಿಗೆ ಅರ್ಜುನ್ ಜನ್ಯ ಮತ್ತು ಶ್ರೀನಿವಾಸ್ ರಾಜು ಅವರ ಕೌಶಲ್ಯಪೂರ್ಣ ನಿರ್ದೇಶನದ ಬ್ಲಾಕ್‌ಬಸ್ಟರ್ ಹಾಡುಗಳು ಕಾರಣವೆಂದು ಹೇಳಬಹುದು, ಜೊತೆಗೆ ಗಣೇಶ್, ಮಾಳವಿಕಾ ನಾಯರ್ ಮತ್ತು ಇಡೀ ಪಾತ್ರವರ್ಗದ ಅಭಿನಯದ ಜೊತೆಗೆ ಕಥೆಯನ್ನ ಪ್ರೇಕ್ಷಕರು ಮೆಚ್ಚಿದ್ದಾರೆ.
ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ದಿ ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿದ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ವಿತರಿಸಿದ ಕೃಷ್ಣಂ ಪ್ರಣಯ ಸಖಿ ಕೇವಲ 10 ದಿನಗಳಲ್ಲಿ ಅಂದಾಜು 20 ಕೋಟಿ ಒಟ್ಟು ಕಲೆಕ್ಷನ್ ಗಳಿಸಿದೆ. ಈ ಗಮನಾರ್ಹ ಸಾಧನೆಯು ಗಣೇಶ್ ಅವರ ಅತ್ಯುತ್ತಮ ಪ್ರದರ್ಶನದ ಚಿತ್ರಗಳಲ್ಲಿ ಒಂದಾಗಿದೆ, ಕೆಲವು ಸಿಂಗಲ್ ಥಿಯೇಟರ್‌ಗಳಲ್ಲಿ 50 ದಿನಗಳವರೆಗೆ ಸಿನಿಮಾ ಪ್ರದರ್ಶಗೊಳ್ಳುವ ನಿರೀಕ್ಷೆಯಿದೆ.
ಆರಂಭದಲ್ಲಿ ಸೀಮಿತ ಸಂಖ್ಯೆಯ 61 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಯಿತು, ಕೃಷ್ಣಂ ಪ್ರಣಯ ಸಖಿ ಶೀಘ್ರವಾಗಿ ಜನಪ್ರಿಯತೆ ಗಳಿಸಿದ ಕಾರಣ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಅದರ ಪ್ರದರ್ಶನಗಳ ವಿಸ್ತರಣೆ ಮಾಡಲಾಯಿು. ಎರಡನೇ ವಾರಕ್ಕೆ ಕಾಲಿಟ್ಟಿರುವ ಚಿತ್ರ ಈಗ ಕರ್ನಾಟಕದಾದ್ಯಂತ ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ 230ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರು ಒಂದರಲ್ಲೇ 150 ಶೋಗಳು ಪ್ರತ್ಯೇಕವಾಗಿ ಪ್ರದರ್ಶನಗೊಳ್ಳುತ್ತಿವೆ.
ಚಿತ್ರಮಂದಿರಗಳಿಗೆ ಭೇಟಿ ನೀಡುವ ಮೂಲಕ ಪ್ರೇಕ್ಷಕರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಣೇಶ್, ಇತ್ತೀಚೆಗೆ ಮೈಸೂರಿನ ವುಡ್‌ಲ್ಯಾಂಡ್ಸ್ ಥಿಯೇಟರ್‌ನಲ್ಲಿ ಕಾಣಿಸಿಕೊಂಡರು. ಅವರನ್ನು ಅವರ ಅಭಿಮಾನಿಗಳು ಉತ್ಸಾಹದಿಂದ ಸ್ವಾಗತಿಸಿದರು. ಕೃಷ್ಣಂ ಪ್ರಣಯ ಸಖಿ ಮಾಳವಿಕಾ ನಾಯರ್ ಅವರ ಕನ್ನಡ ಚಿತ್ರರಂಗದ ಚೊಚ್ಚಲ ಚಿತ್ರವಾಗಿದೆ. ತಾರಾಗಣದಲ್ಲಿ ಶರಣ್ಯ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ, ರಾಮಕೃಷ್ಣ, ಅಶೋಕ್, ಶ್ರುತಿ, ಶಶಿಕುಮಾರ್ ಇದ್ದಾರೆ. ವೆಂಕಟ್ ರಾಮ ಪ್ರಸಾದ್ ಸಿನಿಮಾದ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.
Advertisement