ಬಹುನಿರೀಕ್ಷಿತ ‘ಕೂಲಿ’ ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಹೊಸ ಮಾಹಿತಿಗಳು ಹೊರಬರುತ್ತಿವೆ. ರಜನಿಕಾಂತ್ ಜೊತೆ ಉಪೇಂದ್ರ ನಟಿಸುವ ಬಗ್ಗೆ ಅಫಿಷಿಯಲ್ ಅನೌನ್ಸ್‌ಮೆಂಟ್ ಸಿಕ್ಕ ಬೆನ್ನಲ್ಲೇ ಈಗ ಮತ್ತೊಂದು ಕ್ರೆಜಿ ಅಪ್‌ಡೇಟ್ ಹೊರಬಿದ್ದಿದೆ.
30 ವರ್ಷಗಳ ನಂತರ ತಲೈವಾ ಮತ್ತು ಆಮೀರ್ ಖಾನ್ ಕೂಲಿ ಚಿತ್ರಕ್ಕಾಗಿ ಒಂದಾಗ್ತಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ. 1995ರಲ್ಲಿ ‘ಆತಂಕ್ ಹಿ ಆತಂಕ್’ ಎಂಬ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಆಮೀರ್ ಜೊತೆಯಾಗಿ ನಟಿಸಿದ್ದರು. ಈಗ ಹೊಸ ಪ್ರಾಜೆಕ್ಟ್ ಕೂಲಿ ಚಿತ್ರಕ್ಕಾಗಿ ತಲೈವಾ ಜೊತೆ ಬಾಲಿವುಡ್ ನಟ ಆಮೀರ್ ಖಾನ್ ಸ್ಪೆಷಲ್ ರೋಲ್‌ನಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಸಿನಿಮಾ ತಂಡ ಅಧಿಕೃತ ಮಾಹಿತಿ ನೀಡಬೇಕಾಗಿದೆ. ಆದರೆ ಆಮೀರ್ ಖಾನ್‌ರನ್ನು ಡೈರೆಕ್ಟರ್ ಲೋಕೇಶ್ ಕನಕರಾಜ್ ಟೀಮ್ ಸಂಪರ್ಕಿಸಿದೆ ಎನ್ನಲಾಗಿದೆ.
ಆಮೀರ್ ಖಾನ್ ಈ ಒಂದು ಚಿತ್ರದಲ್ಲಿ ಯಾವ ರೀತಿ ರೋಲ್ ಮಾಡ್ತಾರೆ ಅನ್ನೋ ಪ್ರಶ್ನೆ ಇದೆ. ಆದರೆ, ಸದ್ಯದ ವೈರಲ್ ಸುದ್ದಿಯ ಪ್ರಕಾರ ಆಮೀರ್ ಖಾನ್ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದಾರೆ. ಇಡೀ ಚಿತ್ರದಲ್ಲಿ ಇರದೇ ಇದ್ರೂ ಕೂಡ ಆಮೀರ್ ಖಾನ್ ಇಲ್ಲಿ ಮಹತ್ವದ ರೋಲ್ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಇದೆ.
Advertisement