
ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನವೆಂಬರ್ 15ರಂದು ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆಯಾಗುವುದಾಗಿ ಚಿತ್ರತಂಡ ಘೋಷಿಸಿದೆ.
‘ಭೈರತಿ ರಣಗಲ್’ ಚಿತ್ರವು ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿದೆ. ಈ ಸಿನಿಮಾವನ್ನು ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ನರ್ತನ್ ನಿರ್ದೇಶನದ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಈ ಮೊದಲು ಆಗಸ್ಟ್ 15 ಕ್ಕೆ ರಿಲೀಸ್ ಮಾಡಲು ಚಿತ್ರ ತಂದ ನಿರ್ಧರಿಸಿತ್ತು.
ಅಕ್ಟೋಬರ್‌ನಲ್ಲಿ ಕೆಲವು ದೊಡ್ಡ ಬ್ಯಾನರ್ ಗ ಚಿತ್ರಗಳ ಬಿಡುಗಡೆಗೆ ನಿರ್ಧರಿಸಲಾಗಿದೆ, ಧ್ರುವ ಸರ್ಜಾ ಅವರ ಮಾರ್ಟಿನ್, ಉಪೇಂದ್ರ ಅವರ ಯುಐ, ರಜನಿಕಾಂತ್ ಅವರ ವೆಟ್ಟೈಯನ್, ಸೂರ್ಯ ಅವರ ಕಂಗುವ, ಅಕ್ಷಯ್ ಕುಮಾರ್ ಅವರ ಸ್ಕೈ ಫೋರ್ಸ್ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್ ಆಗುವ ಕಾರಣದಿಂದ ಭೈರತಿ ರಣಗಲ್ ತಂಡವು ಬಿಡುಗಡೆ ದಿನಾಂಕ ಬದಲಾಯಿಸಲು ನಿರ್ಧರಿಸಲಾಗಿದೆ.
ಭೈರತಿ ರಣಗಲ್ ನಲ್ಲಿ ಶಿವರಾಜಕುಮಾರ್ ವಕೀಲರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವರಾಜ್‌ಕುಮಾರ್, ಶ್ರೀ ಮುರಳಿ, ಶಾನ್ವಿ ಶ್ರೀವಾಸ್ತವ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ನಂತರ ತಮಿಳಿನಲ್ಲಿ ಸಿಲಂಬರಸನ್ ನಟಿಸಿದ ಪಾತು ಥಾಲಾ ಎಂದು ಮರುನಿರ್ಮಾಣವಾಯಿತು. ನರ್ತನ್ ನಿರ್ದೇಶನದ ಮತ್ತು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿದ ಭೈರತಿ ರಣಗಲ್ ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್, ಬಾಲಿವುಡ್ ನಟ ರಾಹುಲ್ ಬೋಸ್ ಮತ್ತು ಅವಿನಾಶ್ ಇದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಅವರ ಸಂಗೀತ ಸಂಯೋಜನೆ ಇದೆ.
Advertisement