
ತಿರುವನಂತಪುರಂ: ಮಾಲಿವುಡ್ ನಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು ದೇಶಾದ್ಯಂತ ಸುದ್ದಿ ಮಾಡುತ್ತಿದ್ದು, ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಅಥವಾ AMMA ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ ನೀಡುವ ಮೂಲಕ ಸಂಘ ವಿಸರ್ಜನೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಲೈಂಗಿಕ ಕಿರುಕುಳ ಪ್ರಕರಣದ ಸಂಬಂಧ ಹಲವು ಕಲಾವಿದರು, ಚಿತ್ರ ನಿರ್ದೇಶಕರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇತ್ತೀಚಿನ ದೂರನ್ನು ನಟಿ ಸೋನಿಯಾ ಮಲ್ಹಾರ್ ನೀಡಿದ್ದು, ನಟನೋರ್ವ 2013 ರಲ್ಲಿ ಸಿನಿಮಾ ಸೆಟ್ ನಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಎಸ್ ಐಟಿಗೆ ದೂರು ನೀಡಿದ್ದಾರೆ. #MeToo ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಕೇರಳ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಇದೇ ವೇಳೆ ಸೋನಿಯಾ ಮಲ್ಹಾರ್ ತಮ್ಮ ಆರೋಪಗಳಿಗೂ ನಟ ಜಯಸೂರ್ಯಗೂ ಸಂಬಂಧ ಕಲ್ಪಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಇನ್ನು ಈ ವರೆಗೂ 17 #MeeToo ಪ್ರಕರಣಗಳು ಬಹಿರಂಗವಾಗಿದ್ದು, ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆಗಳು ಬರುತ್ತಿವೆ ಎಂದು ನಟಿಯರು ಆರೋಪಿಸಿದ್ದಾರೆ.
Advertisement